ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಸಂಪ್ರದಾಯಕ್ಕೆ ಬದ್ದವಾಗಿ ನಡೆಯಿತು ವಾಣಿಯ ಗಾಣಿಗ ಸಮುದಾಯ ಭಾಂದವರ "ಸಾಮೂಹಿಕ ವಿವಾಹ".
ನವೆಂಬರ್ 18, 2023
0
ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಸಂಪ್ರದಾಯಕ್ಕೆ ಬದ್ದವಾಗಿ ನಡೆಯಿತು ವಾಣಿಯ ಗಾಣಿಗ ಸಮುದಾಯ ಭಾಂದವರ "ಸಾಮೂಹಿಕ ವಿವಾಹ".
ಕುಂಬಳೆ: ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ, ವಾಣಿಯ ಗಾಣಿಗ ಸಮುದಾಯ ಭಾಂದವರ ಸಾಮೂಹಿಕ ವಿವಾಹವು ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆಯಿತು. 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ವೇಳೆ ಸಂಪ್ರದಾಯ ಪ್ರಕಾರ ಬಾಲಿಕೆಯರಿಗೆ ಚಪ್ಪರ ಮದುವೆ ನಡೆಯಿತು. ಯಾವುದೇ ಆಡಂಬರವಿಲ್ಲದೆ ಸಂಪ್ರದಾಯಕ್ಕೆ ಬದ್ದವಾಗಿ, ವರ್ಷಕ್ಕೆ ಎರಡು ಬಾರಿ ನಡೆಯುತ್ತಿರುವ ಈ ವಿವಾಹ ಮಹೋತ್ಸವವು ಸಮಾಜಕ್ಕೆ ಮಾದರಿಯಾಗಿದೆ. ಇಂದಿನ ವಿವಾಹ ಕಾರ್ಯಕ್ರಮಗಳಲ್ಲಿ ಕಾಸರಗೋಡು ಜಿಲ್ಲೆ ಸೇರುದಂತೆ ನೆರೆಯ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿರುವ ಸಮಾಜ ಬಾಂಧವರು ಭಾಗವಹಿಸಿದರು. ಇನ್ನು ಮುಂದಿನ ವರ್ಷ, 2024 ರ ಮಾರ್ಚ್ ತಿಂಗಳಲ್ಲಿ ಸಾಮೂಹಿಕ ವಿವಾಹವು ನಡೆಯಲಿದೆ.