ಲೈಫ್ ವಸತಿ ಯೋಜನೆಯಂತೆ ವರ್ಕಾಡಿ ಪಂಚಾಯತ್ ವತಿಯಿಂದ ಕಡು ಬಡ ಕುಟುಂಬಕ್ಕೆ ಮನೆಯ ಕೀಲಿ ಕೈ ಹಸ್ತಾಂತರ.
ನವೆಂಬರ್ 22, 2023
0
ಬಡತನ ನಿರ್ಮೂಲನ ಕಾರ್ಯಕ್ರಮ ವ್ಯವಸ್ಥಿತ ಜ್ಯಾರಿಗೆ ಜಿಲ್ಲಾಧಿಕಾರಿ ಕರೆ.
ವರ್ಕಾಡಿ: ಹಿಂದುಳಿದ ಪ್ರದೇಶಗಳಲ್ಲಿ ಸರ್ಕಾರದ ಜನ ಕ್ಷೇಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜ್ಯಾರಿಗೊಳಿಸಿ ಜನ ಸಾಮಾನ್ಯರಿಗೆ ನೆಮ್ಮದಿಯ ಜೀವನ ಒದಗಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದೇ ಮನಸ್ಸಿನಿಂದ ದುಡಿಯಬೇಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಇಂಬಶೇಖರನ್ ಕರೆ ನೀಡಿದ್ದಾರೆ. ಲೈಫ್ ವಸತಿ ಯೋಜನೆಯಂತೆ ವರ್ಕಾಡಿ ಪಂಚಾಯತ್ ವತಿಯಿಂದ ಕಡು ಬಡ ಕುಟುಂಬಕ್ಕೆ ನಿರ್ಮಿಸಿ ಕೊಡಲಾದ ಮನೆಯ ಕೀಲಿ ಕೈಯನ್ನು ಅವರು ಇಂದು ಹತ್ತನೇ ವಾರ್ಡ್ ಬೋರ್ಕಳಕ್ಕೊಳಪಡುವ ಗುವೆದಪಡ್ಫುವಿನಲ್ಲಿ ಹಸ್ತಾಂತರಿಸಿದರು. ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್, ಉಪಾಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ಪಾಡಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಸಾಮಾನಿ, ಜನಪ್ರತಿನಿಧಿಗಳಾದ ಅಬ್ದುಲ್ ಮಜೀದ್ ಬಿ.ಎ , ಪದ್ಮಾವತಿ, ಕಮರುನ್ನಿಸಾ ಮುಸ್ತಫಾ, ಶಿವರಾಜ್ ಕುಮಾರ್, ಸೀತಾ ಡಿ, ಇಬ್ರಾಹಿಂ ಧರ್ಮನಗರ, ಆಶಾಲತಾ, ಗೀತ ಭಾಸ್ಕರ್, ನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಅನಿಲ್ ಕುಮಾರ್ ಸ್ವಾಗತಿಸಿ, ಪಂಚಾಯತ್ ಸದಸ್ಯರಾದ ಉಮ್ಮರ್ ಬೋರ್ಕಳ ವಂದಿಸಿದರು.