ಹೊಸಂಗಡಿ ಬಿ. ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯ ದಲ್ಲಿ "ವಾಚನ ಪಾಕ್ಷಿಕಾಚರಣೆ".
ಜೂನ್ 29, 2025
0
ಹೊಸಂಗಡಿ ಬಿ. ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯ ದಲ್ಲಿ "ವಾಚನ ಪಾಕ್ಷಿಕಾಚರಣೆ".
ಮಂಜೇಶ್ವರ: ಹೊಸಂಗಡಿಯ ಬಿ. ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ, ವಾಚನ ಪಾಕ್ಷಿಕಾಚರಣೆ ಜರಗಿತು. ಲೈಬ್ರರಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಾನ್ಯಾಂಗಾಡ್ ಪುರಸಭಾ ಮಾಜಿ ಅಧ್ಯಕ್ಷರೂ ಸಾಮಾಜಿಕ ಧುರೀಣ ಶ್ರೀ ವಿ.ವಿ. ರಮೇಶನ್ ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಶ್ರೀ ವಿ.ದಿನೇಶ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ. ಯು. ಸಿ. ಯಲ್ಲಿ ಉತ್ತಮ ಅಂಕ ಗಳಿಸಿದ ಐದು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ಹಾಗೂ ಲೇಖನಿ, ಪುಸ್ತಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕ್ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ರಾಮಯ್ಯ ಶೆಟ್ಟಿ ಗ್ರಂಥಾಲಯ ದ ಸದಸ್ಯರುಗಳಾದ ಕರುಣಾಕರ ಶೆಟ್ಟಿ, ಪ್ರಶಾಂತ್ ಕನಿಲ ಮಾತನಾಡಿದರು. ಆರಂಭದಲ್ಲಿ ಲೈಬ್ರರಿ ಕಾರ್ಯದರ್ಶಿ ಶ್ರೀ ಹೇಮಚಂದ್ರ ಉಳ್ಳಾಲ್ ಸ್ವಾಗತಿಸಿ ಗ್ರಂಥಪಾಲಕಿ ಶ್ರೀಮತಿ ಪವಿತ್ರ ಪ್ರಸಾದ್ ಧನ್ಯವಾದವಿತ್ತರು.