Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಡಿಮದ್ದುನ್ನು ವಶ ಪಡಿಸಿದ ಪಾಲಕ್ಕಾಡ್ ಪೊಲೀಸರು. ನಾಳೆ ಕುಂಬಳೆಯಲ್ಲಿ ಸಾಂಕೇತಿಕ ಬೆಡಿ ಪ್ರದರ್ಶನ.

ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಡಿಮದ್ದುನ್ನು ವಶ ಪಡಿಸಿದ ಪಾಲಕ್ಕಾಡ್ ಪೊಲೀಸರು. ನಾಳೆ ಕುಂಬಳೆಯಲ್ಲಿ ಸಾಂಕೇತಿಕ ಬೆಡಿ ಪ್ರದರ್ಶನ.
ಮಂಜೇಶ್ವರ: ಕುಂಬಳೆ ಸೀಮೆಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅಭೂತಪೂರ್ವ ಬ್ರಹ್ಮಕಲಶದ ಬಳಿಕ ಇದೀಗ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಉತ್ಸವದಂಗವಾಗಿ ನಾಳೆ ರಾತ್ರಿ "ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವ" ನಡೆಯಲಿದೆ. ಆದರೆ ನಾಳೆ ನಡೆಯಬೇಕಾಗಿದ್ದ "ಬೆಡಿ ಮಹೋತ್ಸವ"ಕ್ಕೆ ಈ ಬಾರಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ನಿಂದ ತರಿಸಲು ಉದ್ದೇಶಿಸಿದ ಲಕ್ಷಾಂತರ ರೂಪಾಯಿ ಮೊತ್ತದ ಸಿಡಿಮದ್ದು ಉತ್ಪನ್ನಗಳನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡಕೊಂಡ ಘಟನೆ ನಡೆದಿದೆ. ಕಳೆದ ಬಾರಿ ಪುತ್ತೂರಿನಿಂದ ಬೆಡಿ ತಂದು ಸಿಡಿಸಿದರೆ ಈ ಬಾರಿ ಪಾಲಕ್ಕಾಡ್ ನಿಂದ ಬೆಡಿ ತರಿಸಲು ಬೆಡಿ ಉತ್ಸವ ಸಮಿತಿ ನಿರ್ಧರಿಸಿತ್ತು. ಈ ಬಗ್ಗೆ ಅಲ್ಲಿನ ಬೆಡಿ ಗುತ್ತಿಗೆದಾರರಾರಿಗೆ ಸಮಿತಿಯು ಇಂದು ತಲುಪಿಸಬೇಕೆಂದು ಮುಂಚಿತವಾಗಿ ಮಾಹಿತಿಯನ್ನು ಕೂಡಾ ನೀಡಿದ್ದರು. ಆದರೆ ಇಂದು ಕುಂಬಳೆಗೆ ತಲುಪುವ ಮುನ್ನವೇ ತಯಾರಿಸಿ, ಮಾಡಿಟ್ಟಿದ್ದ ಕರಿಮದ್ದು, ಸಿಡಿಮದ್ದು ಉತ್ಪನ್ನ ಮತ್ತು ಪಟಾಕಿಗಳು ಇತರ ಉತ್ಪನ್ನಗಳನ್ನು ಪೊಲೀಸರು ತಮ್ಮ ಕಸ್ಟಡಿಗೆ ವಶಪಡಿಸಿಕೊಂಡಿದ್ದಾರೆ. ಎಂದು ಗುತ್ತಿಗೆದಾರನಾದ ಚಾಲಕುಡಿಯ ವಿ.ಸಿ ವರ್ಗ್ಹೀಸ್ ಅವರು ಈ ವಿವರವನ್ನು ಉತ್ಸವ ಕಮಿಟಿ ಪದಾಧಿಕಾರಿಗಳಿಗೆ ಇಂದು ತಿಳಿಸಿದ್ದಾರೆ. 1070 ಕಿ.ಗ್ರಾಂ ಬೆಡಿ ಮದ್ದು ಮತ್ತು ಪಟಾಕಿ ಸಂಗ್ರಹಣೆಯನ್ನು ವಡಕ್ಕಂಚೇರಿ ಪೊಲೀಸ್ ವಶಪಡಿಸಿದ್ದು, ಇದರಲ್ಲಿ 800 ಕಿ.ಗ್ರಾಂ ಫೋಟಸ್ಸಿಯಂ ನೈಟ್ರೇಟ್, 200 ಕಿ.ಗ್ರಾಂ ಆಲೂಮಿನಿಯಂ ಪೌಡರ್, 18 ಕಿ.ಗ್ರಾಂ ಸಲ್ಪರ್, 2000 ಓಲೆ ಪಟಾಕಿ, 20 ಕಿ.ಗ್ರಾಂ ಸಿಡಿಮದ್ದು, ಮದ್ದು ತುಂಬಿಸಿದ ಸಿಡಿ ಮದ್ದು ಎಂಬಿವುಗಳನ್ನು ಇಂದು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ಎಂಬಲ್ಲಿ ಗದ್ದೆಯ ಹೊಳೆ ಬದಿಗೆ ಸೇರಿದ ರಬ್ಬರ್ ತೋಟದ ಶೆಡ್ ನಲ್ಲಿ ಈ ಸಿಡಿಮದ್ದುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದು ಆಗಮಿಸಿದ ಪೊಲೀಸರನ್ನು ಕಂಡು ಕಾರ್ಮಿಕರು ಓಡಿ ಪರಾರಿಯಾಗಿದ್ದಾರೆ. ವರ್ಗೀಸ್ ಅವರ ಹೆಸರಲ್ಲಿ ಐದು ಕಿ.ಗ್ರಾಂ ಬೆಡಿ ಮದ್ದು ಕೈ ವಶ ಇಡುವ ಲೈಸನ್ಸ್ ಮಾತ್ರ ಇರುವುದೆಂದು ಆಳತೂರ್ ಡಿ.ವೈ.ಎಸ್.ಪಿ ಆರ್ ಸಂತೋಷ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಇದೀಗ ಸಿಡಿಮದ್ದು ಸಂಗ್ರಹಿಸಿಟ್ಟ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದ್ದು, ಬೆಡಿ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಇನ್ನು ನಾಶಪಡಿಸುವುದಾಗಿ ಪೊಲೀಸರು ತಿಳಿಸಿದಾರೆ. ಪಾರಂಪರಿಕವಾಗಿ ನಡೆಯುವ ಕುಂಬಳೆ ಬೆಡಿ ಇಡೀ ದೇಶ ವಿದೇಶದಲ್ಲಿ ಕೂಡಾ ಖ್ಯಾತಿಯನ್ನು ಪಡೆದಿದ್ದು, ಈ ಬಾರಿ ಬ್ರಹ್ಮ ಕಲಶದ ಬಳಿಕ ಉತ್ಸವಕ್ಕೆ ಹೆಚ್ಚಿನ ಕಲೆ ಕಂಡು ಬಂದಿತ್ತು. ಇದೀಗ ಉತ್ಸವಕ್ಕೆ ದಿನಂಪ್ರತಿ ಸಾವಿರಾರು ಅಧಿಕ ಭಕ್ತರು ಆಗಮಿಸಿ ದೇವರ ದರ್ಶನಗೈದು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಳೆ ನಡೆಯುವ ಬೆಡಿ ಮಹೋತ್ಸವ ವೀಕ್ಷಿಸಲು ಈಗಾಗಲೇ ಜಿಲ್ಲೆಯಲ್ಲದೇ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಲು ಉತ್ಸುಕರಾಗಿದ್ದರು. ಇದೀಗ ಬೆಡಿ ಮಹೋತ್ಸವ ಸಮಿತಿ ದೇವರ ಪಾರಂಪರಿಕ ಸೇವೆಗಾಗಿ ಸಾಂಕೇತಿಕವಾಗಿ ಬೆಡಿ ಸಿಡಿಸಲು ನಿರ್ಧರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries