ಮಂಜೇಶ್ವರದ ಬಹುಮುಖ ಪ್ರತಿಭೆ - ಅಪರ್ಣಾ ಪಿ. ಇದೀಗ ರಾಜ್ಯ ಮಟ್ಟದ ಪ್ರತಿಭೆ.
ಫೆಬ್ರವರಿ 09, 2024
0
ಮಂಜೇಶ್ವರದ ಬಹುಮುಖ ಪ್ರತಿಭೆ - ಅಪರ್ಣಾ ಪಿ. ಇದೀಗ ರಾಜ್ಯ ಮಟ್ಟದ ಪ್ರತಿಭೆ.
ಮಂಜೇಶ್ವರ: ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ತನ್ನ ಎಳವೆಯಲ್ಲಿಯೇ ಸತತ ಅಭ್ಯಾಸ ಮನೆಯಲ್ಲಿ, ಕಲಿಸಿದ ಸಂಸ್ಕಾರ, ಗುರು ಹಿರಿಯರ ಶಿಕ್ಷಕರ ಮೇಲಿನ ಗೌರವ ಸಾಧನೆಯ ಮೆಟ್ಟಿಲನ್ನೇರಿ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡ ಅಸಾಧಾರಣ ಪ್ರತಿಭೆ ಕುಮಾರಿ ಅಪರ್ಣಾ ಪಿ.
ಮಂಜೇಶ್ವರ ಶ್ರೀಮದ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಇವಳು ಶಾಸ್ತ್ರೀಯ ಸಂಗೀತ, ಸಮೂಹಗಾನ,
ಕಥಕ್ಕಳಿ ಸಂಗೀತ ಮಾತ್ರವಲ್ಲದೆ ಗಣಿತ, ವಿಜ್ಞಾನ,ರಸಪ್ರಶ್ನೆ ವಿಭಾಗದಲ್ಲಿ ಮೇರು ಜ್ಞಾನವನ್ನು ಹೊಂದಿದ ಸಕಲ ಕಲೆಗಳ ವಾರಿಸುದಾರಳು.
ಎಸ್ ಎ ಟಿ ಪ್ರೌಢಶಾಲಾ ಇಂಗ್ಲೀಷ್ ಭಾಷಾ ಶಿಕ್ಷಕರಾದ ಶ್ರೀ ಪೂರ್ಣಯ ಪುರಾಣಿಕ್ ಮತ್ತು ಎಸ್ಎ ಟಿ ಎಲ್ ಪಿ ಶಾಲಾ ಶಿಕ್ಷಕಿ ಬೀನಾ ದಂಪತಿಗಳ ಪುತ್ರಿಯಾಗಿರುವ ಈಕೆ ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಅತೀವ ಪಾಂಡಿತ್ಯವನ್ನು ಹೊಂದಿ ಇಂಗ್ಲೀಷ್ ಕಥೆ ರಚನೆಯಲ್ಲಿ ರಾಜ್ಯ ಮಟ್ಟದಲ್ಲಿ ಎ ಗ್ರೇಡ್, ಕಥಕ್ಕಳಿ ಸಂಗೀತದಲ್ಲಿ ಎ ಗ್ರೇಡ್, ರಾಜ್ಯಮಟ್ಟದ ಗಣಿತ ಶ್ರೀನಿವಾಸ ರಾಮಾನುಜನ್ ಪೇಪರ್ ಪ್ರಸೆಂಟೇಷನ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಕಾಸರಗೋಡು ಜಿಲ್ಲೆಯನ್ನು, ಮಂಜೇಶ್ವರ ತಾಲೂಕನ್ನು ಗುರುತಿಸಲ್ಪಡುವಂತೆ ಮಾಡಿದ ಚುರುಕು ಸ್ವಭಾವದ ಅಮೂಲ್ಯ ರತ್ನ.
ಕಲಿಕೆಯಲ್ಲಿ ಮಾತ್ರವಾಗಿರದೆ ನಡೆ ನುಡಿಯಲ್ಲೂ ಮಾದರಿ ವ್ಯಕ್ತಿತ್ವನ್ನು ಹೊಂದಿದ ಇವಳ ಸತತ ಅಭ್ಯಾಸ, ಹೊಸತನ್ನು ಕಲಿಯ ಬೇಕೆಂಬ, ಹಂಬಲ ದಿಟ್ಟ ಹೆಜ್ಜೆಯ ಪ್ರಯತ್ನ ಸಾಧನೆಯ ಹಿಂದಿರುವ ಗುಟ್ಟು. ಇಂತಹ ಸಾಧನೆಯ ಹಾದಿ ಇವಳ ಮುಂದಿನ ಬದುಕಿಗೆ ಶ್ರೀರಕ್ಷೆಯನ್ನಿತ್ತು ಕಾಪಾಡಲಿ ಎನ್ನುವ ಶುಭಹಾರೈಕೆಗಳು.