ಮಂಜೇಶ್ವರ ಒಳ ಪೇಟೆಯಲ್ಲಿ ನಡೆದ ಎಲ್.ಡಿ. ಎಫ್ ಜನಕೀಯ ಪ್ರತಿಭಟನೆ.
ಫೆಬ್ರವರಿ 09, 2024
0
ಮಂಜೇಶ್ವರ ಒಳ ಪೇಟೆಯಲ್ಲಿ ನಡೆದ ಎಲ್.ಡಿ. ಎಫ್ ಜನಕೀಯ ಪ್ರತಿಭಟನೆ.
ಮಂಜೇಶ್ವರ: ಎಲ್.ಡಿ.ಎಫ್ ಜನಕೀಯ ಪ್ರತಿಭಟನೆಯನ್ನು ಸಿಪಿಐ(ಎಂ) ಜಿಲ್ಲಾ ಸಮಿತಿ ಹಾಗೂ ಪುತ್ತಿಗೆ ಪಂಚಾಯತ್ ಅಧ್ಯಕ್ಷರಾದ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿ ಮಾತನಾಡಿದರು.
ಸಿಪಿಐ(ಎಂ) ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್(ಎಸ್) ನೇತಾರ ಮನೋಜ್ ಕುಮಾರ್, ಸಿಪಿಐ(ಎಂ) ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಕೆ ಕಮಲಾಕ್ಷ, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ ಮೊದಲಾದವರು ಉಪಸ್ಥಿತರಿದ್ದರು.ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಎಸ್. ರಾಮಚಂದ್ರ ಬಡಾಜೆ ಸ್ವಾಗತಿಸಿ, ಸಿಪಿಐ(ಎಂ) ಕುಂಜತ್ತೂರು ಲೋಕಲ್ ಕಾರ್ಯದರ್ಶಿ ಅಶ್ರಫ್ ಕುಂಜತ್ತೂರ್ ವಂದಿಸಿದರು.