ಬೀರಂಟಿಕೆರೆ ಆರಿಕ್ಕಾಡಿ ಶ್ರೀ ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮರಾಯಿ ದೈವಸ್ಥಾನದ "ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ" ದ ಆಮಂತ್ರಣ ಪತ್ರಿಕೆಯ ಬಿಡುಗಡೆ.
ಫೆಬ್ರವರಿ 09, 2024
0
ಬೀರಂಟಿಕೆರೆ ಆರಿಕ್ಕಾಡಿ ಶ್ರೀ ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮರಾಯಿ ದೈವಸ್ಥಾನದ "ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ" ದ ಆಮಂತ್ರಣ ಪತ್ರಿಕೆಯ ಬಿಡುಗಡೆ.
ಕುಂಬಳೆ: ಬೀರಂಟಿಕೆರೆ ಆರಿಕ್ಕಾಡಿ ಶ್ರೀ ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮರಾಯಿ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಬ್ರಹ್ಮ ಶ್ರೀ ಚಕ್ರಪಾಣಿ ದೇವಪೂಜಿತಾಯರ ಮತ್ತು ಬ್ರಹ್ಮ ಶ್ರೀ ಯೋಗೀಶ ಕಡಮಣ್ಣಾಯರ ದಿವ್ಯ ಹಸ್ತದಿಂದ ಇಂದು ಬೆಳಗ್ಗೆ ನಡೆಯಿತು. ವೇದಮೂರ್ತಿ ಶ್ರೀ ಮುರಳಿ ಕಿದೂರ್, ಶ್ರೀ ವಸಂತಿ ಆರಿಕ್ಕಾಡಿ, ಶ್ರೀ ಮಮತಾ ಆರಿಕ್ಕಾಡಿ ಮತ್ತು ಜೀರ್ಣೋದ್ದಾರ ಸಮಿತಿಯ ಗೌರವ ಸಲಹೆಗಾರರಾದ ಲಕ್ಷ್ಮಣ ಆಳ್ವ ಕುಂಡಾಪು ಗುತ್ತು, ನಾಗೇಶ್ ಕಾರ್ಲೆ, ಪ್ರವೀಣ ಶೆಟ್ಟಿ ಜಾಲು, ರತ್ನಾಕರ ರೈ ಕುಂಡಾಪು, ತುಳಸಿದಾಸ್ ಮಂಜೇಶ್ವರ, ಗೋಪಾಲ ಕೃಷ್ಣ ಪೆರುವಾಯಿ ಆಡಳಿತ ಮೋಕ್ತೆಸರರಾದ ಐತ್ತಪ್ಪ ಆರಿಕ್ಕಾಡಿ, ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಾರಾಯಣ ಜೋತಿಷ್ಯರು ಕುಡಾಲು, ಉಪಾಧ್ಯಕ್ಷರಾದ ರಾಮ್ ಪ್ರಸಾದ್ ಖಂಡಿಗೆ, ಕಾರ್ಯದರ್ಶಿಗಳಾದ ಗಂಗಾಧರ ಕುಂಡಾಪು, ಅಜೇಯ ಆರಿಕ್ಕಾಡಿ,ಮತ್ತು ಕಲಶೋತ್ಸವ ಮಹಿಳಾ ಸಮಿತಿಯ ಅಧ್ಯಕ್ಷರಾದ ಎಸ್ ಶೋಭಾ ಕೋಟೆಕ್ಕಾರ್, ಕಾರ್ಯದರ್ಶಿ ಶಶಿಕಲಾ ಆರಿಕ್ಕಾಡಿ, ಕಮಲ ಆರಿಕ್ಕಾಡಿ, ಸುಂದರಿ ಆರಿಕ್ಕಾಡಿ, ಜಯರಾಜ್ ಮಾಸ್ಟರ್ ಬಂಬ್ರಾಣ ಉಪಸ್ಥಿತರಿದ್ದರು