ಊಟ ಮಾಡಿ ಪತ್ನಿ ಜೊತೆ ಮಲಗಿದ ಪತಿರಾಯ ನಿನ್ನೆ ಮಧ್ಯರಾತ್ರಿ ವೇಳೆ ನಾಪತ್ತೆ.
ನವೆಂಬರ್ 19, 2023
0
ಊಟ ಮಾಡಿ ಪತ್ನಿ ಜೊತೆ ಮಲಗಿದ ಪತಿರಾಯ ನಿನ್ನೆ ಮಧ್ಯರಾತ್ರಿ ವೇಳೆ ನಾಪತ್ತೆ.
ಮಂಜೇಶ್ವರ: ಊಟ ಮಾಡಿ ಪತ್ನಿ ಜೊತೆ ಮಲಗಿದ ಪತಿರಾಯ ನಿನ್ನೆ ಮಧ್ಯರಾತ್ರಿ ವೇಳೆ ನಾಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿರುವ ಅಮನ್ ಕಾಟೇಜ್ ಬಳಿಯ ನಿವಾಸಿಯಾಗಿರುವ ದಿ. ಫೆಲಿಕ್ಸ್ ಮೊಂತೆರೋ - ಅಪೋಲಿನ್ ಲೋಬೋ ದಂಪತಿಯ ಪುತ್ರ ಮಂಜೇಶ್ವರ ಕಿರು ಬಂದರ್ ನಲ್ಲಿ ಮೀನುಗಾರರಾಗಿರುವ ರೋಷನ್ ಮೊಂತೆರೋ (42) ನಾಪತ್ತೆಯಾದ ವ್ಯಕ್ತಿ. ನಿನ್ನೆ ರಾತ್ರಿ ಊಟ ಮಾಡಿ ಪತ್ನಿ ರೇಖಾ ಮೊಂತೆರೋ ಜೊತೆ ಮಲಗಿದ್ದ ರೋಷನ್, ಮಧ್ಯರಾತ್ರಿ 2.30 ವೇಳೆ ರೇಖಾರಿಗೆ ಎಚ್ಚರವಾದಾಗ ರೋಷನ್ ನಾಪತ್ತೆಯಾಗಿದ್ದರು. ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಮೊಬೈಲ್ ಹಾಗೂ ಚಪ್ಪಲಿ ಮನೆಯಲ್ಲಿ ಬಿಟ್ಟು ಹೋಗಿದ್ದು, ಈ ಬಗ್ಗೆ ಪತ್ನಿ ಇಂದು ಬೆಳಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೋಷನ್ ನಾಪತ್ತೆ ಹಿನ್ನಲೆಯಲ್ಲಿ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಆತಂಕಕ್ಕೀಡಾಗಿದ್ದು, ರೋಷನ್ ರ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೀನು ಕಾರ್ಮಿಕರಾದ ಸ್ನೇಹಿತರು ಇಂದು ಬೆಳಗ್ಗಿನಿಂದ ಸಂಜೆ ತನಕ ಮಂಜೇಶ್ವರದ ಸಮುದ್ರ ತೀರ ಪ್ರದೇಶದಲ್ಲಿ ಹಾಗೂ ಸಮುದ್ರದಲ್ಲಿ ಸುಮಾರು ಕಿಲೋ ಮೀಟರ್ ದೋಣಿಯಲ್ಲಿ ತೆರಳಿ ಹುಡುಕಾಡಿದರೂ, ಪತ್ತೆಯಾಗದ ಹಿನ್ನಲೆಯಲ್ಲಿ ಸಂಜೆ ವೇಳೆ ಹಿಂತಿರುಗಿದ್ದಾರೆ. ನಾಪತ್ತೆಯಾದ ರೋಷನ್ ಕಂಡು ಬಂದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ 04998 272640 ಗೆ ತಿಳಿಸಬೇಕಾಗಿ ವಿನಂತಿ.