ಎಲ್. ಐ.ಸಿ ಏಜೆಂಟ್, ಮಂಜೇಶ್ವರ "ರಾಧಾ ಎಲೆಕ್ಟ್ರಿಕಲ್" ಮಾಲಕ ಬಡಾಜೆ ಚೌಕಿ ನಿವಾಸಿ ಸೋಮಶೇಖರ (56) ಹೃದಯಾಘಾತದಿಂದ ನಿಧನ.
ಜುಲೈ 08, 2025
0
ಎಲ್. ಐ.ಸಿ ಏಜೆಂಟ್, ಮಂಜೇಶ್ವರ "ರಾಧಾ ಎಲೆಕ್ಟ್ರಿಕಲ್" ಮಾಲಕ ಬಡಾಜೆ ಚೌಕಿ ನಿವಾಸಿ ಸೋಮಶೇಖರ (56) ಹೃದಯಾಘಾತದಿಂದ ನಿಧನ.
ಮಂಜೇಶ್ವರ: ಹಿರಿಯ ಎಲ್. ಐ.ಸಿ ಏಜೆಂಟ್ ಮಂಜೇಶ್ವರ ರೈಲು ನಿಲ್ದಾಣ ಸಮೀಪವಿರುವ ರಾಧಾ ಎಲೆಕ್ಟ್ರಿಕಲ್ ಮಾಲಕ ಬಡಾಜೆ ಚೌಕಿ ನಿವಾಸಿ ಸೋಮಶೇಖರ ಬಡಾಜೆ (56) ಇಂದು ಮುಂಜಾನೆ 2.30 ಕ್ಕೆ ಹೃದಯಾಘಾತದಿಂದ ನಿಧನರಾದರು. ಕಳೆದ 25 ವರ್ಷಗಳಿಂದ ಮಂಜೇಶ್ವರದಲ್ಲಿ ಎಲ್. ಐ.ಸಿ ಏಜೆಂಟ್, 20 ವರ್ಷಗಳಿಂದ ಮಂಜೇಶ್ವರ ರೈಲು ನಿಲ್ದಾಣ ಸಮೀಪವಿರುವ "ರಾಧಾ ಎಲೆಕ್ಟ್ರಿಕಲ್" ಎಂಬ ಇಲೆಕ್ಟ್ರಿಕ್ ಸಂಸ್ಥೆಯ ಮಾಲಕರಾಗಿ, ಜನಜನಿತರಾಗಿದ್ದರು. ಮೃತರು ದಿವಂಗತರಾದ ದೇರು ಮೂಲ್ಯ - ರಾಧಾ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಚಂದ್ರಿಕಾ, ಮಕ್ಕಳಾದ: ಸಮರ್ಥ್, ಸಮೃದ್ಧಿ, ಸಹೋದರಿಯರಾದ: ರಮಣಿ, ಶೋಭಾ, ಚಂದ್ರಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಏಕ ಸಹೋದರ: ನಾರಾಯಣ ಮೂರು ತಿಂಗಳ ಹಿಂದೆ ನಿಧನರಾಗಿದ್ದರು. ಮೃತರ ಮನೆಗೆ ವಾರ್ಡ್ ಸದಸ್ಯ ಯಾದವ್ ಬಡಾಜೆ ತೆರಳಿ ಮನೆಯವರನ್ನು ಸಂತೈಸಿ, ಸಂತಾಪ ವ್ಯಕ್ತಪಡಿಸಿದ್ದಾರೆ.