ವರ್ಕಾಡಿ ಲೆಂಕ್ರಿಕಾಡಿನ ದೈವದ ಪಾತ್ರಿ ಪದ್ಮನಾಭ (48) ನಿಧನ.
ಜುಲೈ 08, 2025
0
ವರ್ಕಾಡಿ ಲೆಂಕ್ರಿಕಾಡಿನ ದೈವದ ಪಾತ್ರಿ ಪದ್ಮನಾಭ (48) ನಿಧನ.
ಮಂಜೇಶ್ವರ: ಮಲರಾಯ ಕಲ್ಲುರ್ಟಿ ದೈವದ ಪಾತ್ರಿಯಾಗಿರುವ ವರ್ಕಾಡಿಯ ಬೋರ್ಕಳ ಬಳಿಯ ಲೆಂಕ್ರಿಕಾಡು ನಿವಾಸಿ ಪದ್ಮನಾಭ (48) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಿಧನ ಹೊಂದಿದರು. ದಿ. ಮೋನಪ್ಪ ಮೂಲ್ಯರ ಪುತ್ರರಾಗಿರುವ ಮೃತರು ಮೇಸ್ತ್ರಿ ಕೆಲಸ ಮಾಡುತಿದ್ದು, ಬೋರ್ಕಳ ಲೆಂಕ್ರಿಕಾಡಿನ ಶ್ರೀ ಮಲರಾಯ ಕಲ್ಲುರ್ಟಿ ದೈವಸ್ಥಾನದ ದೈವದ ಪಾತ್ರಿಯಾಗಿದ್ದರು. ಪತ್ನಿ ಶಶಿಕಲಾ, ಮಕ್ಕಳಾದ: ಲೋಹಿತ್, ಯಶಸ್ವಿ, ಅಳಿಯ: ಯತೀಶ್, ಸಹೋದರ - ಸೋದರಿಯರಾದ ಆನಂದ, ಜಯಂತಿ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಲೆಂಕ್ರಿಕಾಡು ಶ್ರೀ ಮಲರಾಯ ಕಲ್ಲುರ್ಟಿ ದೈವಸ್ಥಾನದ ಆಡಳಿತ ಸಮಿತಿ, ಬೊರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ನಾಗಬ್ರಹ್ಮ ಸ್ವಸಹಾಯ ಸಂಘ ಗಾಢವಾದ ಸಂತಾಪ ಸೂಚಿಸಿದ್ದಾರೆ.
ಮೃತರ ಮನೆಗೆ ವಾರ್ಡ್ ಸದಸ್ಯ ಉಮ್ಮರ್ ಬೋರ್ಕಳ, ಸೇರಿದಂತೆ ಸ್ಥಳೀಯ ಮುಖಂಡರು ತೆರಳಿ ಸಂತಾಪ ಸೂಚಿಸಿದ್ದಾರೆ. ಮೃತರ ಅಳಿಯ ಯತೀಶ್ ರವರು ವರ್ಕಾಡಿ ಮಜೀರ್ಪಳ್ಳದ "ಸಂಭ್ರಮ ಹಾಗೂ ಫ್ಯಾಷನ್ ಸ್ಟ್ರೀಟ್" ಜವಳಿ ಅಂಗಡಿಯ ಮಾಲಕರಾಗಿದ್ದಾರೆ.