ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ: ಕೋಟೆಕಾರು, ಬಂಗ್ರಮಂಜೇಶ್ವರ, ಆರಿಕ್ಕಾಡಿ ಕಾರ್ಲೆ, ಕಾಞಂಗಾಡು, ಪೂರ್ವಭಾವಿ ಕ್ಷೇತ್ರ ಸಂದರ್ಶನ ಸಂಪನ್ನ.
ಜುಲೈ 08, 2025
0
ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ:
ಕೋಟೆಕಾರು, ಬಂಗ್ರಮಂಜೇಶ್ವರ, ಆರಿಕ್ಕಾಡಿ ಕಾರ್ಲೆ, ಕಾಞಂಗಾಡು, ಪೂರ್ವಭಾವಿ ಕ್ಷೇತ್ರ ಸಂದರ್ಶನ ಸಂಪನ್ನ.
ಕಾಸರಗೋಡು: ಕಾಞಂಗಾಡು ಶ್ರೀ ಮತ್ ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು, ವಿಶ್ವಂಬರ ಆಚಾರ್ಯ, ಸತೀಶ ಆಚಾರ್ಯ, ಬಾಲಕೃಷ್ಣ ಆಚಾರ್ಯ ಪೊಯಿನಾಚಿ, ಹರ್ಷ ಆಚಾರ್ಯ, ಪುದಿಯಕಂಡ, ಅರವಿಂದ ಆಚಾರ್ಯ, ರಾಮಕೃಷ್ಣ ಆಚಾರ್ಯ, ಗಣೇಶ ಆಚಾರ್ಯ, ಶೀಲಾವತಿ ಆಚಾರ್ಯ, ವಾಸಂತಿ ಆಚಾರ್ಯ, ಗೀತಾ ಆಚಾರ್ಯ, ಲೀಲಾವತಿ ಆಚಾರ್ಯ, ರೋಹಿಣಿ ಆಚಾರ್ಯ, ನಮಿತಾ ಆಚಾರ್ಯ, ಶೋಭಾ ಆಚಾರ್ಯ, ಹರಿಶ್ಚಂದ್ರ
ಪುರೋಹಿತ್, ಮಧು ಪುರೋಹಿತ್, ಮನೋಜ್ ಪುರೋಹಿತ್ ಮುಂತಾದವರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪದಾಧಿಕಾರಿಗಳಾದ, ಜನಾರ್ಧನ ಆಚಾರ್ಯ ಕನ್ಯಾನ, ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಭಾಗವಹಿಸಿದ್ದರು.
ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ದೇವಸ್ಥಾನದ ಅಧ್ಯಕ್ಷ ಜನಾರ್ದನ ಆಚಾರ್ಯ ಆರಿಕ್ಕಾಡಿ ಸ್ವಾಗತಿಸಿದರು, ತಂತ್ರಿ ಪುರೋಹಿತ ರಾಮಕೃಷ್ಣ ಆಚಾರ್ಯ, ದೇವಸ್ಥಾನದ ಆಡಳಿತ ಸಮಿತಿಯ ಹರಿಶ್ಚಂದ್ರ ಆಚಾರ್ಯ ಬೇಕೂರು, ಶಿವಾನಂದ ಆಚಾರ್ಯ ಪ್ರತಾಪನಗರ, ರಾಜೇಶ್ ಆಚಾರ್ಯ ತಾಳಿಪಡ್ಪು, ಶಿವಪ್ರಸಾದ್ ಆಚಾರ್ಯ ಪೆರ್ಲ, ಶ್ರೀಧರ ಆಚಾರ್ಯ ಎಡನೀರು, ನವೀನ್ ಆಚಾರ್ಯ ಪ್ರತಾಪನಗರ, ಸೇರಿದಂತೆ ಆಡಳಿತ ಸಮಿತಿ, ಮಹಿಳಾ ಸಮಿತಿ, ಭಜನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕೋಟೆಕಾರು ಶ್ರೀ ಕಾಳಿಕಾಂಬಾ ಕ್ಷೇತ್ರಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ದೇವಸ್ಥಾನದ ಅಧ್ಯಕ್ಷ ಸುಂದರ ಆಚಾರ್ಯ ಕೋಟೆಕಾರು ಸ್ವಾಗತಿಸಿದರು. ತಂತ್ರಿವರ್ಯ ಪುರೋಹಿತ ರತ್ನ ಬಿ. ಕೇಶವ ಆಚಾರ್ಯ, ಎಂ. ಮೋಹನ ಆಚಾರ್ಯ, ಶಂಕರ ಆಚಾರ್ಯ, ಪ್ರಭಾಕರ ಆಚಾರ್ಯ, ತಿಲಕ ಆಚಾರ್ಯ, ಪ್ರಸಾದ್ ಆಚಾರ್ಯ , ಸದ್ಯೋಜಾತ ಆಚಾರ್ಯ, ಶಿಲ್ಪಿ ರಾಘವೇಂದ್ರ ಆಚಾರ್ಯ, ಆಡಳಿತ ಸಮಿತಿ, ಮಹಿಳಾ ಸಮಿತಿ, ಭಜನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ತಿತರಿದ್ದರು. ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿದ ವೇಳೆ
ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಯದುನಂದನ ಆಚಾರ್ಯ ಸ್ವಾಗತಿಸಿದರು, ಪ್ರಧಾನ ಆರ್ಚಕ ಪ್ರಕಾಶ್ಚಂದ್ರ ಶೌತ್ರಿ, ಭಾಸ್ಕರ ಆಚಾರ್ಯ ಪ್ರತಾಪನಗರ, ವೆಂಕಟ್ರಮಣ ಆಚಾರ್ಯ ಉಳುವಾರು ವೆಂಕಟ್ರಮಣ ಆಚಾರ್ಯ ಮುಳಿಗದ್ದೆ, ಪೋಳ್ಯ ಉಮೇಶ ಆಚಾರ್ಯ, ಮೋಹನಚಂದ್ರ ಆಚಾರ್ಯ ಕಟ್ಟೆ ಬಜಾರ್, ಅಶೋಕ್ ಆಚಾರ್ಯ ಬಂಗ್ರಮಂಜೇಶ್ವರ, ಎಚ್. ಜಯಲಕ್ಷ್ಮೀ ಆಚಾರ್ಯ ಹೊಸಮನೆ, ನಲ್ಕ ರಾಮಚಂದ್ರ ಆಚಾರ್ಯ, ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಅನಂತ ಆಚಾರ್ಯ ಮಠದ ಬಳಿ, ನಿತ್ಯಾನಂದ ಆಚಾರ್ಯ, ವನಿತಾ ತುಕಾರಾಮ ಆಚಾರ್ಯ, ಹರೀಶ್ ಆಚಾರ್ಯ ಪುತ್ತೂರು, ಆಡಳಿತ ಸಮಿತಿ, ಮಹಿಳಾ ಸಮಿತಿ, ಓಜ ಸಾಹಿತ್ಯ ಕೂಟ ಪದಾಧಿಕಾರಿಗಳು ಸದಸ್ಯರು ಉಪಸ್ತಿತರಿದ್ದರು. ಕೋಟೆಕಾರು, ಬಂಗ್ರಮಂಜೇಶ್ವರ ಮತ್ತು ಆರಿಕ್ಕಾಡಿ ದೇವಸ್ಥಾನಗಳಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಜನಾರ್ಧನ ಆಚಾರ್ಯ ಬಜಕೂಡ್ಲು, ಬಿ. ವಿಘ್ನೇಶ್ ಆಚಾರ್ಯ ಕಾಸರಗೋಡು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಭಾಗವಹಿಸಿದರು.