ಅಡೆಕಳಕಟ್ಟೆ ಪ್ರಿ ಪ್ರೈಮರಿ ಶಾಲೆಯಲ್ಲಿ ಮತದಾನಗೈದ ಕಾಸರಗೋಡು ಲೋಕಸಭಾ ಎನ್. ಡಿ. ಎ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್.
ಏಪ್ರಿಲ್ 26, 2024
0
ಅಡೆಕಳಕಟ್ಟೆ ಪ್ರಿ ಪ್ರೈಮರಿ ಶಾಲೆಯಲ್ಲಿ ಮತದಾನಗೈದ ಕಾಸರಗೋಡು ಲೋಕಸಭಾ ಎನ್. ಡಿ. ಎ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್.
ಮಂಜೇಶ್ವರ: ಕಾಸರಗೋಡು ಲೋಕಸಭಾ ಎನ್. ಡಿ. ಎ ಅಭ್ಯರ್ಥಿ ಶ್ರೀಮತಿ ಎಂ.
ಎಲ್ ಅಶ್ವಿನಿ ಯವರು ಇಂದು ಬೆಳಿಗ್ಗೆ ವರ್ಕಾಡಿ ಗ್ರಾಮ ಪಂಚಾಯತ್ ನ 12 ನೇ ವಾರ್ಡ್ ಕೊಡ್ಲಮೊಗರಿನ ಅಡೆಕಳಕಟ್ಟೆ ಪ್ರಿ ಪ್ರೈಮರಿ ಶಾಲೆಯ 43 ನೇ ಬೂತ್ ನಲ್ಲಿ ಮತದಾನಗೈದರು. ಬಳಿಕ ಮತದಾನಗೈದ ಸಂತಸದಲ್ಲಿ "ನಮ್ಮ ಮಂಜೇಶ್ವರ ನ್ಯೂಸ್" ಜೊತೆ ಮಾತನಾಡಿದ ಅಶ್ವಿನಿಯವರು ದೇಶದ ಸಮಗ್ರ ಆಡಳಿತಕ್ಕೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿ ಪಕ್ಷವೇ ದೇಶದ ಆಧಾರ. ದೇಶಕ್ಕಾಗಿ ಹಾಗೂ ಕಾಸರಗೋಡು ಲೋಕ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಗುರಿ. ಅದಕ್ಕಾಗಿ ಇಂದು ಮತದಾರರು ಪಕ್ಷಕ್ಕಾಗಿ ಬೆಂಬಲಿಸುವರು ಎಂಬ ಭರವಸೆ ನನಗಿದೆ ಎಂದರು. ಈ ಶಾಲೆಯ ಬೂತ್ ನ ಲ್ಲಿ ಒಟ್ಟು 1200 ರಷ್ಟು ಮತದಾರರರಿದ್ದಾರೆ.