"ಜೆಕೆ ತುಳುನಾಡ್" ಖ್ಯಾತಿಯ ಸ್ಟೇಟಸ್ ವಿಡಿಯೋ ಎಡಿಟರ್ ಜೀವನ್ ಪೂಜಾರಿ ಬಾಯಾರ್ ಗೆ ಕಟೀಲು ಕ್ಷೇತ್ರದಲ್ಲಿ ಗೌರವಾರ್ಪಣೆ.
ಏಪ್ರಿಲ್ 27, 2024
0
"ಜೆಕೆ ತುಳುನಾಡ್" ಖ್ಯಾತಿಯ ಸ್ಟೇಟಸ್ ವಿಡಿಯೋ ಎಡಿಟರ್ ಜೀವನ್ ಪೂಜಾರಿ ಬಾಯಾರ್ ಗೆ ಕಟೀಲು ಕ್ಷೇತ್ರದಲ್ಲಿ ಗೌರವಾರ್ಪಣೆ.
ಮಂಜೇಶ್ವರ: ಜೆ.ಕೆ ತುಳುನಾಡ್ ಎಂದೇ ಖ್ಯಾತಿ ಪಡೆದಿರುವ ದೇವರ ನಾಮವಳಿಯ ಸ್ಟೇಟಸ್ ವಿಡಿಯೋ ಎಡಿಟರ್ ಪೈವಳಿಕೆ ಬಳಿಯ ಬಾಯಾರ್ ನಿವಾಸಿ ಜೀವನ್ ಪೂಜಾರಿ ಬಾಯಾರ್ ವರನ್ನ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ ವೇಳೆ ಕ್ಷೇತ್ರದ ಅರ್ಚಕರಾದ ಶ್ರೀ ಸದಾನಂದ ಆಸ್ರಣ್ಣರವರು ದೇವರ ನಡೆಯಲ್ಲಿ ಶಾಲು ಹೊದೆಸಿ, ಪ್ರಸಾದ ನೀಡಿ ಗೌರವಿಸಿದರು. ಈ ವೇಳೆ ಮಿಥುನ್ ಕೊಡೆತ್ತೂರು ಉಪಸ್ಥಿತರಿದ್ದರು.
ಕಳೆದ ಹಲವು ವರ್ಷಗಳಿಂದ ವಿಡಿಯೋ ಆಡಿಟರ್ ರಾಗಿ ಧಾರ್ಮಿಕ ಕ್ಷೇತ್ರಗಳ, ದೇವರ, ನಿತ್ಯ ಸ್ಟೇಟಸ್ ವಿಡಿಯೋ ತುಣುಕುಗಳು ಸ್ವತಃ ರಚಿಸಿ, ಇವರ ಇನ್ಸ್ಟಾ ಗ್ರಾಂ ಪೇಜ್ ನಲ್ಲಿ ಹಾಗೂ ತಮ್ಮ ಆತ್ಮೀಯ ಸ್ನೇಹಿತರ ವರ್ಗದವರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ನಲ್ಲಿ ಆಯಾಯ ದಿನಗಳಲ್ಲಿ ದೇವರ ನಾಮವಳಿಗೆ ಅನುಗುಣವಾಗಿ ಪ್ರಕಟಿಸುತ್ತಿದ್ದಾರೆ. ಪ್ರಧಾನವಾಗಿ ಪ್ರತೀ ಶುಕ್ರವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಭಾವಚಿತ್ರಕ್ಕೆ ಭಕ್ತಿಗೀತೆಯ ಸಾರವನ್ನು ಅಳವಡಿಸಿ, ಸ್ಟೇಟಸ್ ವಿಡಿಯೋ ತಯಾರಿಸುವಲ್ಲಿ ನಿಪುಣರಾಗಿರುವ ಇವರ ಸೇವೆಯನ್ನು ಮನ್ನಿಸಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ದುಬೈಯ ಹೋಟೆಲೊಂದರಲ್ಲಿ ಇಂಜಿನಿಯರ್ ಡಿಪಾರ್ಟ್ ಮೆಂಟ್ ನಲ್ಲಿ ಕಳೆದ ಹಲವು ವರ್ಷಗಳಿಂದ ದುಡಿಯುತ್ತಿರುವ ಇವರು ಇತ್ತೀಚೆಗಷ್ಟೇ ಮುಲ್ಕಿ ನಿವಾಸಿ ಭವ್ಯ ಜೊತೆ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹಲವಾರು ಅಭಿಮಾನಿ ವರ್ಗವನ್ನು ಒಳಗೊಂಡ ಜೀವನ್ ಕುಮಾರ್ ಬಾಯಾರ್ ಇಂದು ತನ್ನ ಗ್ರಾಮದ ಬಾಯಾರ್ ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಶ್ರೀ ಮಲರಾಯ ದೈವಗಳ ಭಂಡಾರ ನಿಲಯದ ಬಂಡಿ ಜಾತ್ರೆಯ ಬಗ್ಗೆ ವಿಡಿಯೋ ತುಣುಕನ್ನು ರಚಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು, ಹಲವರ ಪ್ರಶಂಸೆಗೆ ಕೂಡಾ ಪಾತ್ರವಾಗಿದೆ. ಇವರ ಎಡಿಟಿಂಗ್ ವಿಡಿಯೋಗಳಿಗಾಗಿ JK Thulunad ಇನ್ ಸ್ಟಾ ಗ್ರಾಂ ನಲ್ಲಿ ವೀಕ್ಷಿಸಬಹುದಾಗಿದೆ.