ಮಂಜೇಶ್ವರ ಗ್ರಾಮ ಪಂಚಾಯತ್ 2 ನೇ ವಾರ್ಡಿನ ಅಂಗನವಾಡಿ ಪಕ್ಕದ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿ ಕಲುಷಿತ.
ಏಪ್ರಿಲ್ 27, 2024
0
ಮಂಜೇಶ್ವರ ಗ್ರಾಮ ಪಂಚಾಯತ್ 2 ನೇ ವಾರ್ಡಿನ ಅಂಗನವಾಡಿ ಪಕ್ಕದ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿ ಕಲುಷಿತ.
ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ 2 ನೇ ವಾರ್ಡಿನ ಅಂಗನವಾಡಿ ಪಕ್ಕದಲ್ಲಿರುವ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿ ಕಲುಷಿತಗೊಂಡಿದೆ.
ಸಂಬಂಧಪಟ್ಟವರು ಬಾವಿಯನ್ನು ಶುದ್ಧೀಕರಿಸಿದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಲುಷಿತಗೊಂಡ ಈ ನೀರನ್ನು ಅಂಗನವಾಡಿ ಮಕ್ಕಳು ಸಹಿತ ಈ ಕಾಲನಿಯಲ್ಲಿರುವವರು ಉಪಯೋಗಿಸುತಿದ್ದಾರೆ.
ಈ ಬಾವಿಯ ನೀರಿನ ಸ್ವಚ್ಚತೆ ಆಗಿಲ್ಲ. ಪಂಚಾಯತು ಅಧಿಕೃತರು ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳು ಕೂಡಾ ಇದೇ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಊರವರು ಈ ಬಗ್ಗೆ ಹಲವು ಸಲ ಸಂಬಂಧಪಟ್ಟವರನ್ನು ವಿನಂತಿಸಿಕೊಂಡರೂ ಯೂರೂ ಇತ್ತ ಕಡೆ ಗಮನ ಹರಿಸಿಲ್ಲವೆಂದು ಸ್ಥಳೀಯರು ಹೇಳುತಿದ್ದಾರೆ.
ಈ ಬಾವಿಯ ನೀರಿನಲ್ಲಿ ಕಸ ಕಡ್ಡಿ ಜೊತೆಯಾಗಿ ತ್ಯಾಜ್ಯ ಹಾಗೂ ಕೆಸರು ತುಂಬಿ ಕೊಂಡಿದೆ. ಬಾವಿಯಲ್ಲಿರುವ ನೀರಿನಲ್ಲಿ ಸಣ್ಣ ಪ್ರಮಾಣದ ಹುಳಗಳು ಕೂಡಾ ಆಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬಾವಿ ಇದೀಗ ಸಾಂಕ್ರಾಮಿಕ ರೋಗದ ಕೇಂದ್ರವಾಗಿ ಪರಿಣಮಿಸಿದೆ.