ವರ್ಕಾಡಿಯ ಬೇಕರಿ ಜಂಕ್ಷನ್ ಬಳಿ ಮನೆಗೆ ಗುಂಡು ಹಾರಾಟ. ಕಿಟಿಕಿ ಗಾಜುಗಳಿಗೆ ಹಾನಿ.
ಜುಲೈ 03, 2025
0
ವರ್ಕಾಡಿಯ ಬೇಕರಿ ಜಂಕ್ಷನ್ ಬಳಿ ಮನೆಗೆ ಗುಂಡು ಹಾರಾಟ. ಕಿಟಿಕಿ ಗಾಜುಗಳಿಗೆ ಹಾನಿ.
ಮಂಜೇಶ್ವರ: ವರ್ಕಾಡಿಯ ಬೇಕರಿ ಜಂಕ್ಷನ್ ಬಳಿ ಮನೆಗೆ ಗುಂಡು ಹಾರಾಟ ನಡೆದ ಘಟನೆ ನಡೆದಿದೆ. ಇಲ್ಲಿನ ನಲ್ಲಂಗಿಪದವು ಬಿ.ಎಂ.ಹರೀಶ್ ಎಂಬವರ ಮನೆಗೆ ನಿನ್ನೆ ಗುಂಡು ಹಾರಾಟ ನಡೆದಿದ್ದು, ಗುಂಡು ಹಾರಾಟದ ಶಬ್ದ ಕೇಳಿ ಹರೀಶ್ ಹಾಗೂ ಮನೆಯವರು ನಿದ್ದೆಯಿಂದೆದ್ದು ಲೈಟ್ ಹಾಕಿ ನೋಡಿದಾಗ ಒಂದು ಕಾರು, ಸ್ಕೂಟರ್ ಹೋಗುವುದು ಕಂಡು ಬಂದಿದೆ. ಈ ಬಗ್ಗೆ ಹರೀಶ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಈಗಲೂ ತನಿಖೆ ನಡೆಸುತ್ತಿದ್ದಾರೆ. ಗುಂಡು ತಾಗಿ ಕಿಟಿಕಿ ಗಾಜುಗಳು ಒಡೆದಿದೆ. ಗುಂಡು ಮನೆಯೊಳಗೆ ಪ್ರವೇಶಿಸಿದೆ. ಘಟನೆಯಿಂದ ಮನೆಯವರಿಗೆ ಯಾರಿಗೂ ಗಾಯಗಳಾಗಿಲ್ಲ. ಹಂದಿ ಬೇಟೆಗಾರರ ಕೋವಿಯಿಂದ ಸಿಡಿದ ಗುಂಡು ಗುರಿ ತಪ್ಪಿ ಹರೀಶರ ಮನೆಯೊಳಗೆ ಪ್ರವೇಶಿಸಿರಬಹುದೆಂಬ ಶಂಕೆ ಉಂಟಾಗಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ.