ಬಡಗಿ ವೃತ್ತಿ ಮಾಡುತ್ತಿರುವ ಚಂದ್ರಶೇಖರ ಕೊಡಂಚಿಲ್ (48) ಅಸೌಖ್ಯದಿಂದ ನಿಧನ.
ಮೇ 02, 2024
0
ಬಡಗಿ ವೃತ್ತಿ ಮಾಡುತ್ತಿರುವ ಚಂದ್ರಶೇಖರ ಕೊಡಂಚಿಲ್ (48) ಅಸೌಖ್ಯದಿಂದ ನಿಧನ.
ಮಂಜೇಶ್ವರ: ಮಜಿಬೈಲ್ ಬಳಿಯ ಬೆಜ್ಜ ಕೊಡಂಚಿಲ್ ನಿವಾಸಿ, ಬಡಗಿ ವೃತ್ತಿ ಮಾಡುತ್ತಿರುವ ಚಂದ್ರ ಶೇಖರ (48) ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ 10 ದಿನಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಸಂಜೆ ನಿಧನರಾದರು. ಮೃತರು ದಿ. ತುಕ್ರ ಸಪಲ್ಯ - ಕಲ್ಯಾಣಿ ದಂಪತಿ ಪುತ್ರರಾಗಿದ್ದು, ತಾಯಿ, ಪತ್ನಿ: ಪೂರ್ಣಿಮಾ, ಏಕ ಪುತ್ರ, ಸಹೋದರರಾದ: ಮಹಾಬಲ, ಗಣೇಶ್, ಗಿರೀಶ್, ಏಕ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ನಾಳೆ (03 - 05 - 24 ಶುಕ್ರವಾರ) ಬೆಳಗ್ಗೆ 10.30 ಕ್ಕೆ ಮನೆ ಪರಿಸರದಲ್ಲಿ ನಡೆಯಲಿದೆ. ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಸಕ್ರೀಯರಾಗಿದ್ದ ಚಂದ್ರ ಶೇಖರ ರವರು ಕಡಂಬಾರು ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನದ ಸಕ್ರೀಯ ಕಾರ್ಯಕರ್ತರಾಗಿದ್ದು, ಕಡಂಬಾರ್ ಶ್ರೀ ಶಾಸ್ತ ಫ್ರೆಂಡ್ಸ್ ಕ್ಲಬ್ ನ ಮಾಜಿ ಉಪಾಧ್ಯಕ್ಷರಾಗಿದ್ದು, ಬಿಜೆಪಿ 12 ಬೂತ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರ ನಿಧನಕ್ಕೆ: ಕಡಂಬಾರು ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನದ ಸಮಿತಿ, ಶ್ರೀ ಶಾಸ್ತ ಫ್ರೆಂಡ್ಸ್ ಕ್ಲಬ್ ಕಡಂಬಾರ್ ಸಂತಾಪ ಸೂಚಿಸಿದ್ದಾರೆ.