ಸ್ಥಳೀಯಡಳಿತ ದ ಅವಗಣನೆ ಕೇರಳದ ಅಭಿವೃದ್ಧಿ ಕುಂಟಿತ - ಬಿಜೆಪಿ.
ಮೇ 28, 2024
0
ಸ್ಥಳೀಯಡಳಿತ ದ ಅವಗಣನೆ ಕೇರಳದ ಅಭಿವೃದ್ಧಿಕುಂಟಿತ - ಬಿಜೆಪಿ.
ಹೊಸಂಗಡಿ :ಕೇರಳ ರಾಜ್ಯ ಸರಕಾರ ಫಲನುಭವಿಗಳನ್ನು ವಂಚಿಸುತ್ತಿದೆ. ಲೈಫ್ ಮನೆ ನಿರ್ಮಾಣ ಸ್ಥಗಿತವಾಗಿದೆ, ಕೇರಳ ಸರಕಾರ ನೀಡಬೇಕಾದ ಫಲನುಭವಿಗಳ ಶೇರ್ ನೀಡುತ್ತಿಲ್ಲ.
ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಲ್ಲಿ ಕಳ್ಳತನ ವ್ಯಾಪಾಕ ವಾಗಿದೆ,ಪೊಲೀಸ್ ಇಲಾಖೆ ನಿಸ್ಕೃಯ ವಾಗಿದೆ
ವಿದ್ಯುತ್ ಸಮಸ್ಯೆ ಕೇಳೋರಿಲ್ಲ. ಪೆನ್ಸನ್ ಹಣ ಬರುತ್ತಿಲ್ಲ ಹೀಗೆ ರಾಜ್ಯ ಸರಕಾರ ಜನರನ್ನ ವಂಚನೆ ಮಾಡುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಆರೋಪಿಸಿದೆ.
ಹೊಸಬೆಟ್ಟು ದುರ್ಗಾ ಪರಮೇಶ್ವರಿ ಸಭಾಂಗಣ ದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ್ ಗೊಸಡ ಉದ್ಘಾಟನೆ ಮಾಡಿ ಮಾತನಾಡಿದರು.
ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ ಉಪಸ್ಥಿತರಿದ್ದರು ಯಾದವ ಬಡಾಜೆ ಅಧ್ಯಕ್ಷತೆ ವಹಿಸಿದ್ದರು,
ಮುಖಂಡರಾದ ಲಕ್ಷ್ಮಣ ಬಿ ಎಂ, ವಿನಯ ಭಾಸ್ಕರ್, ನಿಶಾ ಭಟ್, ನವೀನ್ ಮಜಲು, ಸೂರಜ್ ಹೊಸಬೆಟ್ಟು, ಚಂದು ಮಂಜೇಶ್ವರ ಮೊದಲದವರು ಉಪಸ್ಥಿತರಿದ್ದರು. ಸೌಹರ್ಧ ನವಡ ಸ್ವಾಗತಿಸಿ ತುಳಸಿ ವಂದಿಸಿದರು