ಮೂವಾಜೆ ಮನೆತನದ ಹಿರಿಯ ಕೊಂಡಿ ಶ್ರೀಮತಿ ರತ್ನಾವತಿ ಆಚಾರ್ಯ (97) ನಿಧನ.
ಮೇ 28, 2024
0
ಮೂವಾಜೆ ಮನೆತನದ ಹಿರಿಯ ಕೊಂಡಿ ಶ್ರೀಮತಿ ರತ್ನಾವತಿ ಆಚಾರ್ಯ (97) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ರಾತ್ರಿ 8.40 ಕ್ಕೆ ನಿಧನರಾದರು.
ವಿಟ್ಲ: ಬಳಿಯ ಅಳಿಕೆ ಪಡಿಬಾಗಿಲುವಿನ ಮೂವಾಜೆ ದಿ. ಕೃಷ್ಣಪ್ಪ ಆಚಾರ್ಯರ ಧರ್ಮಪತ್ನಿಯಾಗಿದ್ದಾರೆ ಶ್ರೀಮತಿ ರತ್ನಾವತಿ ಆಚಾರ್ಯರವರು. ಮೂವಾಜೆಯ ಮನೆತನದಲ್ಲಿ 76 ವರ್ಷಗಳ ಕಾಲ ಬಾಳಿದ ಹಿರಿಯ ಮಾತೃ ಸ್ವರೂಪಿಣಿಯಾಗಿದ್ದಾರೆ. ಒಟ್ಟು 19 ಮಂದಿ ಮೊಮ್ಮಕ್ಕಳಲ್ಲಿ 16 ಮಂದಿ ಮರಿ ಮಕ್ಕಳಿದ್ದು, ಮೂವಾಜೆ ಮನೆತನದ ಹಿರಿಯ ಮಹಿಳೆಯಾಗಿದ್ದರು. ಮೃತರು ಮಕ್ಕಳಾದ: ವಾರಿಜಾಕ್ಷಿ, ಮೂವಾಜೆ ಸೀತಾರಾಮ ಆಚಾರ್ಯ ಕಾಸರಗೋಡು (ಅಧ್ಯಕ್ಷರು: ನ್ಯಾಶನಲ್ ವಿಶ್ವಕರ್ಮ ಫೆಡರೇಶನ್ ಕಾಸರಗೋಡು), ಪಾಂಡುರಂಗ ಆಚಾರ್ಯ ಮೂವಾಜೆ, ಜಯಲಕ್ಷ್ಮೀ, ಪದ್ಮನಾಭ ಆಚಾರ್ಯ ಮೂವಾಜೆ, ಮನೋಹರ, ಪದ್ಮಿನಿ, ಅಳಿಯಂದಿರಾದ: ಬಾಲಕೃಷ್ಣ ಆಚಾರ್ಯ ಮತ್ತಿಕೆರೆ ಬೆಂಗಳೂರು, ವಸಂತ್ ಆಚಾರ್ಯ ಸಾಲ್ಮರ ಪುತ್ತೂರು, ಸೊಸೆಯಂದಿರಾದ: ಮನೋರಮಾ, ಕೀರ್ತಿರೇಖಾ, ವಾಣಿಶ್ರೀ, ಸುಜಾತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪುತ್ರಿ ಪೈಕಿ ಸುಶೀಲ ಆಚಾರ್ಯ ಮತ್ತಿಕೆರೆ ಬೆಂಗಳೂರು ಹಾಗೂ ಅಳಿಯಂದಿರಾದ: ಮಂಚಿ ದಾಮೋದರ ಆಚಾರ್ಯ ಅಳಿಕೆ ಹಾಗೂ ಶ್ರೀ ನಿವಾಸ ಆಚಾರ್ಯ ಮುಳಿಗದ್ದೆ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆ ನಾಳೆ ( 29 - 05 - 2024 ಬುಧವಾರ) ಬೆಳಗ್ಗೆ 10.00 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.