ಮೂರ್ಛೆ ರೋಗ ಸೇರಿದಂತೆ ವಿವಿಧ ತರದ ಅಸೌಖ್ಯದಿಂದ ಬಳಲುತ್ತಿದ್ದ ಕಾಸರಗೋಡು ಕೂಡ್ಲು ನಿವಾಸಿ ದೀಕ್ಷಿತ್ ಆಚಾರ್ಯ (7) ಇಂದು ಬೆಳಗ್ಗೆ ಮೃತ್ಯು.
ಮೇ 30, 2024
0
ಮೂರ್ಛೆ ರೋಗ ಸೇರಿದಂತೆ ವಿವಿಧ ತರದ ಅಸೌಖ್ಯದಿಂದ ಬಳಲುತ್ತಿದ್ದ ಕಾಸರಗೋಡು ಕೂಡ್ಲು ನಿವಾಸಿ ದೀಕ್ಷಿತ್ ಆಚಾರ್ಯ (7) ಇಂದು ಬೆಳಗ್ಗೆ ಮೃತ್ಯು.
ಮಂಜೇಶ್ವರ: ಹಲವು ವರ್ಷಗಳಿಂದ ಮೂರ್ಛೆ ರೋಗಕ್ಕೆ ಹಾಗೂ ವಿವಿಧ ತರದ ಅಸೌಖ್ಯದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದೀಕ್ಷಿತ್ ಆಚಾರ್ಯ (7) ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾನೆ.
ಕಾಸರಗೋಡು ಕೂಡ್ಲು ನಿವಾಸಿ ಹೊಸಂಗಡಿ ಕೆನರಾ ಬ್ಯಾಂಕ್ ನ ಅಪ್ರೈೈಸರ್ ರಾಗಿದ್ದ ಬಿಎಂ ಗಿರೀಶ್ ಆಚಾರ್ಯ - ಮಮತಾ ಗೌರಿ ದಂಪತಿ ಪುತ್ರನಾಗಿದ್ದ ದೀಕ್ಷಿತ್ ಜನಿಸಿದ ಬಳಿಕ ಮೂರ್ಛೆ ರೋಗ ಸೇರಿದಂತೆ ವಿವಿಧ ತರದ ತೊಂದರೆಗಳಿಗೆ ಒಳಗಾಗಿದ್ದನು. ಇದರ ನಡುವೆ ಮಗುವಿನ ತಲೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಕಿಡ್ನಿ ಹಾಗೂ ಯಕೃತ್ತಿನ ಕಾರ್ಯಚಟುವಟಿಕೆಗೆ ಕೂಡಾ ತೊಂದರೆಯಾಗಿತ್ತು. ದೀಕ್ಷಿತ್ ನ ಅಸೌಖ್ಯ ಉಲ್ಬಣಿಸಿ, ಆಸ್ಪತ್ರೆಗೆ ದಾಖಲಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆರವು ಯಾಚಿಸಲಾಯಿತು. ದಾನಿಗಳು ಹೃದಯಂತರು ನೆರವು ನೀಡಿದ್ದರಿಂದ ಚಿಕಿತ್ಸೆಯ ಮೊತ್ತಕ್ಕೆ ಅಲ್ಪ ಪ್ರಮಾಣದಲ್ಲಿ ಸಹಕಾರಿಯಾಯಿತು. ಮೃತಪಟ್ಟ ದೀಕ್ಷಿತ್ ತಂದೆ, ತಾಯಿ, ಏಕ ಸಹೋದರಿ ನಮೃತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಮೃತದೇಹವನ್ನು ಇದೀಗ ಮನೆಗೆ ತರಲಾಗಿದ್ದು, 10.30 ಗಂಟೆಯ ವೇಳೆ ಪಾರೆಕಟ್ಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.