ಆಟವಾಡುತ್ತಿದ್ದ ಒಂದು ವರ್ಷದ ಮಗು ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಮೃತ್ಯು.
ಸೆಪ್ಟೆಂಬರ್ 23, 2024
0
ಆಟವಾಡುತ್ತಿದ್ದ ಒಂದು ವರ್ಷದ ಮಗು ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಮೃತ್ಯು.
ಮಂಜೇಶ್ವರ: ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಒಂದು ವರ್ಷದ ಮಗು ಮೃತಪಟ್ಟ ಘಟನೆ ಹೊಸಂಗಡಿ ಬಳಿಯ ಕಡಂಬಾರ್‌ನಲ್ಲಿ ನಡೆದಿದೆ. ಕಡಂಬಾರ್ ನ ಕೆ. ಎ ಹಾರಿಸ್ , ಖೈರುನ್ನಿಸಾ ದಂಪತಿ ಪುತ್ರಿ ಫಾತಿಮಾ (1) ಮೃತಪಟ್ಟ ಮಗು.ಮನೆಯೊಳಗೆ ಆಟವಾಡುತ್ತಿದ್ದ ಮಗು ಸ್ವಲ್ಪ ಹೊತ್ತಿನ ಬಳಿಕ ಶೌಚಾಲಯದಲ್ಲಿ ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯವರು ಗಮನಿಸಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಗಲೇ ಮಗು ಮೃತಪಟ್ಟಿದೆ. ಘಟನೆ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.