ಮೀಯಪದವು ಶಾಲಾ ಮೈದಾನದಲ್ಲಿ ಜರುಗಿದ ಕಾಸರಗೋಡು ಜಿಲ್ಲಾ ಮಟ್ಟದ "ಆಲ್ ಎಂಪ್ಲಾಯೀಸ್ ಕ್ರಿಕೆಟ್ ಟೂರ್ನಮೆಂಟ್".
ಸೆಪ್ಟೆಂಬರ್ 22, 2024
0
ಕಾಸರಗೋಡು ಜಿಲ್ಲಾ ಮಟ್ಟದ ಆಲ್ ಎಂಪ್ಲಾಯೀಸ್ ಕ್ರಿಕೆಟ್ ಟೂರ್ನಮೆಂಟ್.
ಮಂಜೇಶ್ವರ: ಕಾಸರಗೋಡು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಂಪ್ಲಾಯಿಸ್ ಗಳ ಕ್ರಿಕೆಟ್ ಟೂರ್ನಮೆಂಟ್ ಇ.ಪಿ.ಯಲ್ 2024 ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಟನೆಯನ್ನು ದೈವದ ಪಾತ್ರಿ ಅಡ್ವಕೇಟ್ ಭರತ್ ರಾಜ್ ಅಟ್ಟೆಗೋಳಿ ದೀಪ ಬೆಳಗಿಸಿ, ಉದ್ಘಾಟಿಸಿದರು . ಬಳಿಕ ಮಾತನಾಡಿದ ಅವರು,"ಕ್ರೀಡೆಗಳು ಮಾನಸಿಕವಾಗಿಯೂ ದೈಹಿಕವಾಗಿಯೂ ಉಲ್ಲಾಸವನ್ನು ತರುತ್ತದೆ. ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ ಆದರೆ ಆಟವನ್ನು ಪ್ರೀತಿಸಿ ಕ್ರೀಡಾ ಸ್ಪೂರ್ತಿಯಿಂದ ಆಡಬೇಕು. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಕ್ರೀಡಾಕೂಟ ಮಾದರಿಯಾಗಿರುತ್ತದೆ ಆದ್ದರಿಂದ ಇಂತಹ ಎಂಪ್ಲಾಯೀಸ್ ಗಳ ಕ್ರೀಡಾಕೂಟ ಮಾದರಿಯಾಗಿದೆ ಎಂದು ತಿಳಿಸಿದರು. ಇ.ಪಿ.ಯಲ್ ಸಂಘಟಕರಾದ ಉದಯ್ ಸಾರಂಗ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಮುಖ್ಯೋಪಾಧ್ಯಯರಾದ ಮಹಾಲಿಂಗೇಶ್ವರ ಭಟ್ ಮುಳ್ಳೆರಿಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಿಜ್ಜು ಬಳ್ಳಾರ್, ನಯನ್ ಕುಮಾರ್ ಕುಂಟಾರ್,ಇ.ಪಿ.ಯಲ್ ಸಂಘಟಕ ಅಶೋಕ್ ಕೊಡ್ಲಮೊಗರು, ತುಳಸಿದಾಸ್ ಮಂಜೇಶ್ವರ, ರಘುರಾವ್ ಮಾಸ್ತರ್ ಮಿಯಾಪದವು, ರಾಜೇಶ್ ಕೊಡ್ಲಮೊಗರು ಉಪಸ್ಥಿತರಿದ್ದರು. ಮಿಥುನ್ ಮಾಸ್ತರ್ ಸ್ವರ್ಗ ಸ್ವಾಗತಿಸಿ, ಶ್ಯಾಮ್ ರಂಜಿತ್ ಪೆರ್ಲ ವಂದಿಸಿದರು. ತೌಸಿಫ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.