ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಶ್ರೀ ಅಯ್ಯಪ್ಪ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಪದಗ್ರಹಣ.
ಜುಲೈ 01, 2025
0
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಶ್ರೀ ಅಯ್ಯಪ್ಪ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಪದಗ್ರಹಣ.
ಮಂಜೇಶ್ವರ: ಧಾರ್ಮಿಕ, ಕಾರಣಿಕ ಕ್ಷೇತ್ರವೆಂದೇ, ಜಗದಗಲದಲ್ಲಿ ಖ್ಯಾತಿ ಪಡೆದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ನಡೆಯಿತು. ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ ಗತ ವರ್ಷದ ವರದಿ ವಾಚಿಸಿದರು. ಕೋಶಾಧಿಕಾರಿ ರಮೇಶ್ ಕಟ್ಟೆ ಬಜಾರ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ್ ಆಚಾರ್ಯ, ಕ್ಷೇತ್ರದ ಗುರುಸ್ವಾಮಿಯಾದ ಉದಯ ಪಾವಳ ಉಪಸ್ಥಿತರಿದ್ದರು. ಈ ವೇಳೆ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಗೌರವಾಧ್ಯಕ್ಷರಾಗಿ ಪದ್ಮನಾಭ ಕಡಪ್ಪರ, ಅಧ್ಯಕ್ಷರಾಗಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಪ್ರಧಾನ ಕಾರ್ಯದರ್ಶಿಯಾಗಿ ದೇವರಾಜ್ ಎಂ.ಎಸ್, ಕೋಶಧಿಕಾರಿಯಾಗಿ ಸುನಿಲ್ ಕುಮಾರ್ ಹೊಸಂಗಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣ ಜಿ. ಮಂಜೇಶ್ವರ, ಚಂದ್ರಹಾಸ ಪೆಲಪ್ಪಾಡಿ, ನರೇಂದ್ರ ಹೆಗ್ಡೆ ಹೊಸಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಪೆಲಪ್ಪಾಡಿ, ಸುರೇಶ್ ಗಾಣಿಂಜಾಲ್, ಆಯ್ಕೆಯಾದರು. ಇತರ 25 ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ ಸ್ವಾಗತಿಸಿ, ಹಾಲಿ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಂ.ಎಸ್ ವಂದಿಸಿದರು.