Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಕ್ರಿಡಾಕೂಟ. ಪಿರಾನಾ ಹಂಟರ್ಸ್ ತೆಕ್ಕೆಗೆ ಸಿ.ಪಿ.ಎಲ್ 2023 ಕ್ರಿಕೆಟ್ ಟ್ರೋಫಿ.

ಪಿರಾನಾ ಹಂಟರ್ಸ್ ತೆಕ್ಕೆಗೆ ಸಿ.ಪಿ.ಎಲ್ 2023 ಕ್ರಿಕೆಟ್ ಟ್ರೋಫಿ.
ಮಂಗಳೂರು: ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಕ್ರಿಡಾಕೂಟವು 2 ದಿನಗಳ ಕಾಲ ನಡೆಯಿತು. ವಂದನೀಯ ಬೆಂಜಮಿನ್ ಪಿಂಟೋರವರು ಆಶೀರ್ವಚಿಸಿ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರು ಮುಖ್ಯ ಅಥಿತಿಗಳಾದ ಶಾಸಕ ಉಮಾನಾಥ ಕೋಟ್ಯಾನ್ ರವರು ಮಾತಾನಾಡಿ ಇಂತಹ ಪಂದ್ಯಾಟದಿಂದ ಆಟಗಾರರ ದೈಹಿಕ, ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಿ ಸಮಾಜದಲ್ಲಿ ಅನ್ಯೋನ್ಯತೆಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಂಪತ್ ಶೆಟ್ಟಿ, ಸಿಎ ಕೊಲಿನ್ ರೊಡ್ರಿಗಸ್ , ಫ್ರಾನ್ಸಿಸ್ ಡಿಸೋಜರವರು ಅಥಿತಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾದ ರೋಹನ್ ಮೊಂತೇರೋ ಮಾತನಾಡಿ ಸಮಾಜಕ್ಕೆ ಎಂದೆದಿಗೂ ನಮ್ಮ ಸಹಕಾರ ಇರುತ್ತದೆ ಅವರಲ್ಲೂ ಯುವ ಜನತೆ ಒಟ್ಟುಗೂಡಿ ನಡೆಸುವ ಇಂತಹ ಪಂದ್ಯಾಟಗಳಿಗೆ ನನ್ನ ಕೈಲಾದಷ್ಟು ಸಹಾಯವನ್ನು ತಾನು ಮಾಡುತ್ತೇನೆ ಎಂಬ ಭರವಸೆ ನೀಡಿದರು. ಅಧ್ಯಕ್ಷರ ಜೊತೆ ಎಲ್ಲಾ ಅಥಿತಿಗಳು ಕ್ರಿಕೆಟ್ ಪಂದ್ಯಾಟವನ್ನು ಉದ್ಗಾಟಿಸಿದರು. ಕಥೊಲಿಕ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ವಿನೋದ್ ಪಿಂಟೊ ತಾಕೊಡೆ ಸ್ವಾಗತಿಸಿ, ಜೇಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ 9 ಕ್ಕೆ ಪ್ರಾರಂಭವಾದ ಕ್ರಿಕೆಟ್ ಪಂದ್ಯಾಟವು ರಾತ್ರಿ 12 ತನಕ ನಡೆಯಿತು. ಮರುದಿನ ಬೆಳಿಗ್ಗೆ 10.15 ಕ್ಕೆ ಪ್ರಾರಂಭವಾದ ಪಂದ್ಯಾಟ ಸಂಜೆ 6 ರ ತನಕ ನಡೆದು ವಿನ್ನರ್ ಆಗಿ ಜೋನ್ ನೋರ್ಬಟ್ ಮಾಲಕತ್ವದ ಪಿರಾನಾ ಹಂಟರ್ಸ್ ತಂಡವು ವಿಜಯ ಶಾಲಿಯಾಗಿ, ಪ್ರವೀಣ್ ಸಿಕ್ವೇರಾ ಮಾಲಕತ್ವದ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ ತಂಡವು ರನ್ನರ್ಸ್ ಅಪ್ ಆದರು. ಮೊದಲ ಹಾಗೂ ದ್ವಿತೀಯ ರನ್ನರ್ಸ್ ಕ್ರಮವಾಗಿ ರಿಚರ್ಡ್ ಡಿಸೋಜ ಮಾಲಕತ್ವದ ನೈಟ್ ವಾರಿಯರ್ಸ್ (Knight Warriors) ಹಾಗೂ ಜೊನ್ ಲ್ಯಾನ್ಸಿ ಮಾಲಕತ್ವದ ಲೈಟನ್ ಶಿಪಿಂಗ್ ತಂಡಗಳು ಆಯ್ಕೆಯಾದವು.
ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮ ಜೋಯ್ಲಸ್ ಡಿಸೋಜರವರ ಅಧಕ್ಷತೆಯಲ್ಲಿ ನಡೆಯಿತು, ಗೆದ್ದ ತಂಡಗಳನ್ನು ಅಭಿನಂದಿಸಿ ಸಿಪಿಎಲ್ ಅಧ್ಯಕ್ಷರಾದ ವಿನೋದ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಇಂತಹ ಪಂದ್ಯಗಳು ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಂದನೀಯ ರೋಬರ್ಟ್ ಡಿಸೋಜರವರು ಮಾತನಾಡಿ ಎಲ್ಲಾ ಕ್ರಿಶ್ಚಿಯನ್ ಆಟಗಾರರನ್ನು ಒಟ್ಟುಗೂಡಿಸಿ ಇಂತಹ ಪಂದ್ಯಾಟ ನಡೆಸುವುದು ಅಭಿನಂದನೀಯ, ವಿನೋದ್ ಹಾಗೂ ಸಿಪಿಎಲ್ ಏಸೋಸಿಯೇಷನ್ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಇಂತಹ ಕ್ರಿಕೆಟ್ ಪಂದ್ಯಾಟವು ಇನ್ನಷ್ಟು ವಿಜ್ರಂಭಣೆಯಿಂದ ನಡೆಯಲಿ ಎಂದು ಅಶೀರ್ವದಿಸಿದರು. ಟೈಟಸ್ ನೊರೊನ್ಹಾ, ಎಚ್ಚೆಮ್ ಪೆರ್ನಾಲ್, ರೋಶನ್ ಮಾಡ್ತಾ ಮುಖ್ಯ ಅಥಿತಿಗಳಾಗಿದ್ದು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ವೈಯುಕ್ತಿಕ ಪ್ರಶಸ್ತಿ ಗೆದ್ದ ಆಟಗಾರರ ವಿವರಗಳು: 1)ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್. ಸಚಿನ್ ಪಿರಾನಾ ಹಂಟರ್ಸ್ 2)ಮ್ಯಾನ್ ಆಫ್ ದಿ ಸೀರೀಸ್ ನಿಥಿನ್ ಪ್ರಜ್ವಲ್ ಗ್ಲಾಡಿಯೇಟರ್ಸ್ 3)ಬೆಸ್ಟ್ ಬ್ಯಾಟ್ಸಮನ್ . ಸಂಜಯ್ ಫಿರಾನಾ ಹಂಟರ್ಸ್ 4)ಬೆಸ್ಟ್ ಬೌಲರ್ ಕೆವಿನ್ ಫಿರಾನಾ ಹಂಟರ್ಸ್ 5)ಬೆಸ್ಟ್ ಫಿಲ್ಡರ್ ರಾಕೇಶ್ ಫಿರಾನಾ ಹಂಟರ್ಸ್ 6)ಬೆಸ್ಟ್ ಕ್ಯಾಚ್ ಆಫ್ ದ ಟೂರ್ನಾಮೆಂಟ್ : ಪ್ರಿತೇಶ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ 7)ಬೆಸ್ಟ್ ಕೀಪರ್ ಸುನಿಲ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ 8)ಬೆಸ್ಟ್ ಸೀನಿಯರ್ ಪ್ಲೇಯರ್ ಆರುಣ್ ಡಿಸೋಜಾ ಫಿರಾನಾ ಹಂಟರ್ಸ್ 9)ಬೆಸ್ಟ್ ಜೂನಿಯರ್ ಪ್ಲೇಯರ್ : ಡಿಯೋನ್ ಲೈಟನ್ ಶಿಪ್ಪಿಂಗ್ ಏಬಿ 10)ಓರೆಂಜ್ ಕ್ಯಾಪ್ ಸಂಜಯ್ ಫಿರಾನಾ ಹಂಟರ್ಸ್ 11)ಪರ್ಪಲ್ ಕ್ಯಾಪ್: ಕೆವಿನ್ ಫಿರಾನಾ ಹಂಟರ್ಸ್ 12)ಲೀಗ್ ನ ಎಲ್ಲಾ ಪಂದ್ಯಾಟಗಳಿಗೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಯಿತು. ದಿ ವೇಕೆಂಟ್ ಹೌಸ್ ಚಲನಚಿತ್ರ ನಿರ್ಮಾಪಕಿ ನಟಿ ಎಸ್ತೆರ್ ನೊರೊನ್ಹಾ, ವೊಡ್ತಾಂತ್ಲೆಂ ಫುಲ್ ಖ್ಯಾತಿಯ ನಟ ಓಸ್ಕರ್ ಪೆರ್ನಾಂಡಿಸ್ ಇವರು ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಆಗಮಿಸಿದ್ದು, ಎಲ್ಲಾ ಕ್ರಿಕೆಟ್ ಆಟಗಾರರಿಗೆ ಶುಭಹಾರೈಸಿದರು. ಸಿಪಿಎಲ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries