ಶ್ರೀ ಮಣಿಕಂಠ ಫ್ರೆಂಡ್ಸ್ (ರಿ.) ಕಾಯರ್ ಕಟ್ಟೆ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ.
ನವೆಂಬರ್ 21, 2023
0
ಶ್ರೀ ಮಣಿಕಂಠ ಫ್ರೆಂಡ್ಸ್ (ರಿ.) ಕಾಯರ್ ಕಟ್ಟೆ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ.
ಪೈವಳಿಕೆ: ಶ್ರೀ ಮಣಿಕಂಠ ಫ್ರೆಂಡ್ಸ್ (ರಿ.) ಕಾಯರ್ ಕಟ್ಟೆ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ 550 ಕೆಜಿ ತೂಕದ 28 ತಂಡಗಳ ಪ್ರೀಮಿಯರ್ ಲೀಗ್ ಹಗ್ಗ ಜಗ್ಗಾಟ ಸ್ಪರ್ಧೆಯು ಬಹು ವಿಜೃಂಭಣೆಯಿಂದ ಜರಗಿತು. ಧಾರ್ಮಿಕ ಮುಂದಾಳು ತಲೆಂಗಳ ನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ನಟರಾಜ ರಾವ್ ಕಾಯರ್ ಕಟ್ಟೆ, ಶ್ರೀನಿವಾಸ ಮಾಸ್ಟರ್ ಕಾಯರ್ ಕಟ್ಟೆ, ಶ್ರೀ ಕೃಷ್ಣ ದೇವಕಾನ, ಸುಬ್ರಹ್ಮಣ್ಯ ಭಟ್ ನಾಯರ್ ಪಳ್ಳ, ಗಣೇಶ್ ಮಾಸ್ಟರ್ ಲಾಲ್ ಬಾಗ್, ಜೀವನ್ ಕುಮಾರ್ ಲಾಲ್ ಭಾಗ್ (ಅಧ್ಯಕ್ಷರು), ವಿನೋದ್ ಕುಮಾರ್ ಕಾಯರ್ ಕಟ್ಟೆ (ಕಾರ್ಯದರ್ಶಿ), ದೀಕ್ಷಿತ್ ಕಾಯರ್ ಕಟ್ಟೆ, (ಕೋಶಾಧಿಕಾರಿ) ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಯಂ. ಕೃಷ್ಣ ಭಟ್ ತೆಂಗಿನಕಾಯಿ ಒಡೆಯುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು. ಪಂದ್ಯಾಟದಲ್ಲಿ ಎಲ್ಲಾ ತಂಡಗಳು ಸರಿಯಾದ ಸಮಯಕ್ಕೆ ಹಾಜರಿದ್ದರು. ಬಹಳ ಶಿಸ್ತಿನಿಂದ ಬಹಳ ಬೇಗ ಆಟವನ್ನು ಮುಗಿಸಲು ಸಹಕಾರ ನೀಡಿದ್ದರಿಂದ ಪಂದ್ಯಾಟವು ಬೇಗ ಸಂಪನ್ನಗೊಂಡಿತು. ಸಂಘದ ಸದಸ್ಯರಾದ ನಿತಿನ್ ಕುಲಾಲ್ ಕಾಯರ್ ಕಟ್ಟೆ ಸ್ವಾಗತಿಸಿ, ಗುರು ಪ್ರಸಾದ್ ಕಾಯರ್ ಕಟ್ಟೆ ಧನ್ಯವಾದವಿತ್ತರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡದವರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಥಮ ಬಹುಮಾನವನ್ನು ಆಂಜನೇಯ ಕಣ್ವತೀರ್ಥ, ದ್ವೀತಿಯ ಬಹುಮಾನವನ್ನು ಫ್ರೆಂಡ್ಸ್ ಪಂಜಿಕಲ್ಲು, ತೃತೀಯ ಬಹುಮಾನ ವಿ.ಯಫ್.ಸಿ ದಳಿಕುಕ್ಕು, ಚತುರ್ಥ ಬಹುಮಾನವನ್ನು ಫ್ರೆಂಡ್ಸ್ ಕುಳೂರು ಬಹುಮಾನ ಪಡೆದರು. ದೀಪಾವಳಿ ಪ್ರಯಕ್ತ ಪ್ರತಿ ವರ್ಷದಂತೆ ಈ ವರ್ಷ ಕ್ಲಬಿನ ವತಿಯಿಂದ ಭಜನಾ ಸೇವೆ ಹಾಗೂ ಅನ್ನದಾನ ಸೇವೆಯು ಸಿಡಿಮದ್ದು ಪ್ರದರ್ಶನದೊಂದಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಕಾಯರ್ ಕಟ್ಟೆ ಯಲ್ಲಿ ನಡೆಯಿತು.