Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

"ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಇತರ ಬ್ಯಾಂಕ್ ಗಳಿಗೆ ಮಾದರಿ" - ಸಹಕಾರಿ ಸಚಿವ ಕೆ.ಎನ್. ರಾಜಣ್ಣ.

"ಎಸ್ ಸಿಡಿಸಿಸಿ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಇತರ ಬ್ಯಾಂಕ್ ಗಳಿಗೆ ಮಾದರಿ" -ಸಹಕಾರಿ ಸಚಿವ ಕೆ.ಎನ್. ರಾಜಣ್ಣ
ಮಂಗಳೂರು: ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಜಿಲ್ಲೆಗೆ ಮೊದಲ ಬಾರಿ ಆಗಮಿಸಿದ್ದಾರೆ. ಸಹಕಾರಿ ಇಲಾಖೆಯ ಆಳ ಅಗಲವನ್ನು ಬಲ್ಲ ಇವರು ಸಚಿವರಾಗಿರುವುದು ನಮ್ಮೆಲ್ಲರ ಪುಣ್ಯ" ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಬಳಿಕ ಮಾತಾಡಿದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು, "ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ತತ್ವಗಳ ಸರಿಯಾದ ಪಾಲನೆಯಾಗುತ್ತಿದೆ. ಸಹಕಾರಿ ಆಂದೋಲನದ ಬೇಡಿಕೆ ಈಡೇರಿಸುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ರೈತರಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ಲಾಭ ಇರದಿದ್ದರೂ ವ್ಯವಸಾಯೇತರ ಸಾಲ ನೀಡಿಕೆಯಲ್ಲಿ ಅದನ್ನು ಸರಿದೂಗಿಸುವ ಕೆಲಸವನ್ನು ಎಸ್ ಸಿಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಈ ಮೂಲಕ ಇತರ ಬ್ಯಾಂಕ್ ಗಳಿಗೆ ಮಾದರಿಯಾಗಿದೆ. ಬ್ಯಾಂಕ್ ಅಧ್ಯಕ್ಷರಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರೂ ಗ್ರಾಹಕರ ಹಿತಚಿಂತನೆಯನ್ನು ಕಾಯುತ್ತಿರುವುದು ಖುಷಿಯ ವಿಚಾರ"ಎಂದರು.
"ನಮ್ಮೆಲ್ಲರ ಸಹಕಾರಿಗಳ ಉದ್ದೇಶ ಏನೆಂದರೆ ಸಹಕಾರಿ ಆಂದೋಲನದಿಂದ ಪ್ರಯೋಜನ ಪಡೆದು ಹಳ್ಳಿಗಾಡುಗಳ ಜನರೂ ಕೂಡ ಮುಂದೆ ಬರಬೇಕು. ಬ್ಯಾಂಕ್ ಸೇವೆಗಳನ್ನು ಪಡೆಯಬೇಕು. ಇದು ಜನರ ಆಂದೋಲನವಾಗಿದ್ದು ಯುವಕರು ಮಹಿಳೆಯರು ಭಾಗಿಯಾಗಬೇಕು ಎನ್ನುವ ಆಶಯ ನಮ್ಮದು" ಎಂದರು. "ನೌಕರರಿಗೆ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ವೈದ್ಯನಾಥನ್ ವರದಿಯಲ್ಲಿದ್ದ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳುವುದು, ಏಕಾಏಕಿ ಕೆಲಸದಿಂದ ಕೈ ಬಿಡದಂತೆ ದೂರು ಬಂದಲ್ಲಿ ಸರಿತಪ್ಪು ಆಲೋಚಿಸಿ ಕಾರ್ಯ ಪ್ರವೃತ್ತರಾಗಲು ಕಮಿಟಿ ರೂಪಿಸುವ ಮೂಲಕ ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು" ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಸಿಇಓ ಗೋಪಿನಾಥ್ ಭಟ್, ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries