ಅನಂತಪುರದಲ್ಲಿ ಪ್ರತ್ಯಕ್ಷವಾದ ಹೊಸ ಮೊಸಳೆಗೆ "ಬಬಿಯಾ" ಎಂದು ಮರುನಾಮಕರಣ
ನವೆಂಬರ್ 17, 2023
0
ಅನಂತಪುರದಲ್ಲಿ ಪ್ರತ್ಯಕ್ಷವಾದ ಹೊಸ ಮೊಸಳೆಗೆ "ಬಬಿಯಾ" ಎಂದು ಮರುನಾಮಕರಣ.
ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಕೆರೆಯಲ್ಲಿ ಪ್ರತ್ಯಕ್ಷವಾದ ಮೊಸಳೆಗೆ ಇಂದು ಕ್ಷೇತ್ರದಲ್ಲಿ ನಡೆದ "ಮಕರ ಸಂಭ್ರಮ" ಹಾಗೂ ನೈವೇದ್ಯ ಕಾರ್ಯಕ್ರಮದ ಸಮಾರಂಭದಲ್ಲಿ ಕ್ಷೇತ್ರದ ಆಚಾರ್ಯ ದೇಲಂಪಾಡಿ ಗಣೇಶ ತಂತ್ರಿಗಳ ನಿರ್ದೇಶನದಲ್ಲಿ "ಬಬಿಯಾ" ಎಂದು ಮರುನಾಮಕರಣ ಮಾಡಲಾಯಿತು. ಹರಿಪಾದ ಸೇರಿದ "ಬಬಿಯಾ" ನೆನಪಿಗಾಗಿ ಮೊಸಳೆಗೆ
"ಬಬಿಯಾ" ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಂತ್ರಿಗಳು ತಿಳಿಸಿದ್ದಾರೆ. ಈ ವೇಳೆ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದ್ದರು. ಕಳೆದ ವರ್ಷ ಕ್ಷೇತ್ರದ ಮೊಸಳೆಯಾದ "ಬಬಿಯಾ" ಹರಿಪಾದ ಸೇರಿದ ಬಳಿಕ ಇತ್ತೀಚೆಗೆ ಹೊಸ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕ್ಷೇತ್ರದ ಭಕ್ತ ಜನರಲ್ಲಿ ಸಂತಸ ತಂದಿದೆ.