ಡಿಸೆಂಬರ್ 10ಕ್ಕೆ ದುಬೈಯಲ್ಲಿ "ದುಬೈ ಗಡಿನಾಡ ಉತ್ಸವಕ್ಕೆ ಸಿದ್ಧತೆ ಪೂರ್ಣ.
ನವೆಂಬರ್ 17, 2023
0
ಡಿಸೆಂಬರ್ 10ಕ್ಕೆ ದುಬೈಯಲ್ಲಿ "ದುಬೈ ಗಡಿನಾಡ ಉತ್ಸವಕ್ಕೆ ಸಿದ್ಧತೆ ಪೂರ್ಣ.
ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಯು.ಎ.ಇ. ಘಟಕ ದುಬೈ ಇದರ ವತಿಯಿಂದ ಡಿಸೆಂಬರ್ 10 ರಂದು ದುಬೈನಲ್ಲಿ ಜರಗಲಿರುವ "ದುಬೈ ಗಡಿನಾಡ ಉತ್ಸವ -2023" ಯಶಸ್ವಿನ ಚರ್ಚಿಸಲು ಸಭೆಯ ಜರುಗಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ದುಬೈ ಘಟಕದ ಅಧ್ಯಕ್ಷರಾದ ನ್ಯಾ.ಇಬ್ರಾಹಿಂ ಕಲೀಲ್ ರವರ ಸಭಾ ಅಧ್ಯಕ್ಷತೆಯಲ್ಲಿ ದುಬೈಯ ಬ್ಯುಸಿನೆಸ್ ಬೇ ನ ಬೆ.ಬೈಟ್ಸ್ ರೆಸ್ಟೋರೆಂಟ್ ನಲ್ಲಿ ಜರಗಿತು. ಸಭೆಯಲ್ಲಿ ಗಡಿನಾಡ ಉತ್ಸವದ ಯಶಸ್ವಿನ ಬಗ್ಗೆ ಚರ್ಚಿಸಲಾಯಿತು. ಗಡಿನಾಡಾದ ಕಾಸರಗೋಡು ಜಿಲ್ಲೆಯಿಂದ ಆಗಮಿಸಿದ ಗ.ಸಾ.ಸಾ.ಕಾಸರಗೋಡಿನ ಕೋಶಾಧಿಕಾರಿ ಝಡ್ ಎ.ಕಯ್ಯಾರ್ ಮಾತನಾಡುತ್ತಾ ಇನ್ನೂ ನಮ್ಮ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಕೇವಲ ಬೆರಳೆಣಿಕೆಯಷ್ಟು ದಿನಗಳು ಇರುವುದರಿಂದ ಕಾರ್ಯಕ್ರಮದ ತಯಾರಿ ಆದಷ್ಟು ಬೇಗ ಆಗಬೇಕು.ಎಲ್ಲರನ್ನೂ ಒಟ್ಟುಗೂಡಿಸಿ ಒಂದು ಒಳ್ಳೆಯ ಕಾರ್ಯಕ್ರಮ ಮಾಡುವ ಮತ್ತು ಕಾರ್ಯಕ್ರಮದ ಯಶಸ್ವಿಗೆ ಯು.ಎ.ಇ.ಯಲ್ಲಿ ಇರುವ ಎಲ್ಲಾ ಗಡಿನಾಡ ಕನ್ನಡಿಗರು ಸಹಕಾರಿಸಬೇಕಾಗಿ ವಿನಂತಿಸಿದರು. ಯು.ಎ.ಇ ಸಂದರ್ಶನದಲ್ಲಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮಸ್ಕತ್ ಘಟಕದ ಅಧ್ಯಕ್ಷರಾದ ಅಬೂಬಕರ್ ರೋಯಲ್ ಬೋಲ್ಲಾರ್ ರನ್ನು ದುಬೈ ಘಟಕದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ರೋಯಲ್ ಅಬೂಬಕರ್ ಮಾತನಾಡುತ್ತಾ ಡಿಸೆಂಬರ್ 10 ರಂದು ನಡೆಯಲಿರುವ ದುಬೈಯ ಕಾರ್ಯಕ್ರಮಕ್ಕೆ ಮಸ್ಕತ್ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಬಂದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವ ಭರವಸೆಯನ್ನು ನೀಡುತ್ತೆನೆ. ನಮ್ಮ ಮಸ್ಕತ್ ಘಟಕದ ಕಾರ್ಯಕ್ರಮ ಜನವರಿ 5 ರಂದು ಮಸ್ಕತ್ ನಲ್ಲಿ ಅದ್ದೂರಿಯಾಗಿ ಜರಗಲಿದ್ದು ದುಬೈ ಘಟಕದ ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕೆಂದು ಆಮಂತ್ರಣ ನೀಡಿದರು. ಮುಖ್ಯ ಅತಿಥಿಗಳಾಗಿ ಯುಸುಫ್ ಬೋಲ್ಲಾರ್, ಅಬ್ದುಲ್ ರಹಮಾನ್ ಕಣ್ಣೂರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಸಭೆಯಲ್ಲಿ ಗ.ಸಾ.ಸ ಅಕಾಡೆಮಿ ದುಬೈ ಘಟಕದ ಪದಾಧಿಕಾರಿಗಳಾದ ಸದನ್ ದಾಸ್ ಶಿರೂರು, ಸುಗಂದರಾಜ್ ಬೇಕಲ್, ಪ್ರಧಾನ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ, ಡಾ.ಅಬ್ದುಲ್ ರಹಮಾನ್ ಬಾವ, ಯುಸೂಫ್ ಶೇಣಿ, ಆಶೀಫ್ ಹೊಸಂಗಡಿ, ಕೋಶಾಧಿಕಾರಿ ಇಬ್ರಾಹಿಂ ಬಾಜೂರಿ, ಇಬ್ರಾಹಿಂ ಬೇರಿಕೆ, ಝುಬೈರ್ ಕುಬಣೂರು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್, ಮಂಜುನಾಥ ಕಾಸರಗೋಡು, ಅಶ್ರಫ್ ಪಾವೂರು, ಅಮನ್ ತಳೆಕಲ, ಮನ್ಸೂರು, ಅಶ್ರಫ್ ಪಿ.ಪಿ.ಬಾಯಾರ್, ಸಾಕೀರ್ ಬಾಯರ್, ಆಶೀಖ್ ಮೀಯಾ, ಮಹಮ್ಮದ್ ಕುಞ್ಞಿ ಮಂಜೇಶ್ವರ, ಅರೋನ್ ಪೈವಳಿಕೆ, ಶೀಯಾಬ್ ಜೋಡುಕಲ್ಲು, ಮನ್ಸೂರ್ ಪೆರ್ಲ, ಶಂಶೀರ್ ಮೀಯ ಉಪಸ್ಥಿತರಿದ್ದರು. ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿ, ಮಂಜುನಾಥ ಕಾಸರಗೋಡು ಧನ್ಯವಾದವಿತ್ತರು.