ಕಾಸರಗೋಡು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್ ರ ಚುನಾವಣಾ ಕಛೇರಿ ಉಪ್ಪಳದಲ್ಲಿ ಉದ್ಘಾಟನೆ. ಚುನಾವಣೆ ಕಛೇರಿ ಉದ್ಘಾಟನೆ ಪೂರ್ವಭಾವಿ ಸ್ಥಳದಲ್ಲಿ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಗೆ ದುಷ್ಕರ್ಮಿಗಳಿಂದ ಬ್ಲೇಡ್.
ಮಾರ್ಚ್ 08, 2024
0
ಕಾಸರಗೋಡು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್ ರ ಚುನಾವಣಾ ಕಛೇರಿ ಉಪ್ಪಳದಲ್ಲಿ ಉದ್ಘಾಟನೆ.
ಚುನಾವಣೆ ಕಛೇರಿ ಉದ್ಘಾಟನೆ ಪೂರ್ವಭಾವಿ ಸ್ಥಳದಲ್ಲಿ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಗೆ ದುಷ್ಕರ್ಮಿಗಳಿಂದ ಬ್ಲೇಡ್.
ಮಂಜೇಶ್ವರ: ಕಾಸರಗೋಡು ಲೋಕ ಸಭಾ ಕ್ಷೇತ್ರದ ಎನ್. ಡಿ. ಎ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್ ರ ಮಂಜೇಶ್ವರ ಮಂಡಲ ಚುನಾವಣಾ ಕಛೇರಿ ಉಪ್ಪಳ ಭಗವತೀ ಗೇಟ್ ಸಮೀಪದ ಡಿ.ಎಸ್.ಸಿ.ಕಾಂಪ್ಲೆಕ್ಸ್ ನಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿದೆ.ಭಾಜಪ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ್ ತಂತ್ರಿ ಕುಂಟಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ. ಎಲ್, ರಾಜ್ಯ ಕೌನ್ಸಿಲ್ ಸದಸ್ಯರಾದ ರವೀಂದ್ರನ್, ರಾಜ್ಯ ಸಮಿತಿ ಸದಸ್ಯರಾದ ವಿ ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಪೂಕಟ್ಟೆ, ಸುಧಾಮ ಗೋಸಾಡ, ವಿಜಯ ಕುಮಾರ್ ರೈ, ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ, ವಸಂತ್ ಕುಮಾರ್ ಮಯ್ಯ, ಮಣಿಕಂಠ ರೈ, ಭರತ್ ರೈ, ಅನಿಲ್ ಮಣಿಯಂಪಾರೆ ಹಾಗೂ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಚೇರಿಯಲ್ಲಿ ಕುಂಬಳೆ ಮಂಡಲದ 4 ಪಂಚಾಯತ್ ಗಳಾದ ಕುಂಬಳೆ, ಮಂಗಲ್ಪಾಡಿ, ಎಣ್ಮಕಜೆ, ಪುತ್ತಿಗೆ ಹಾಗೂ ಮಂಜೇಶ್ವರ ಮಂಡಲದ 4 ಪಂಚಾಯತ್ ಗಳಾದ ಮಂಜೇಶ್ವರ, ಮೀಂಜ, ವರ್ಕಾಡಿ, ಪೈವಳಿಕೆಗಳ ಎಲ್ಲಾ ವಾರ್ಡ್ ಗಳ ಬಿಜೆಪಿ ಬೂತ್ ಮಟ್ಟದ ಚುನಾವಣೆಯ ಕಾರ್ಯಕಲಾಪಗಳು ಈ ಪ್ರಧಾನ ಕೇಂದ್ರದಲ್ಲಿ ನಡೆಯಲಿದೆ.
ಉದ್ಘಾಟನೆಯ ಮುನ್ನವೇ ಚುನಾವಣಾ ಕಛೇರಿಯ ಮುಂಭಾಗದಲ್ಲಿ ಅಳವಡಿಸಿದ ಫ್ಲೆಕ್ಸ್ ಬೋರ್ಡ್ ಗೆ ದುಷ್ಕರ್ಮಿಗಳಿಂದ ಬ್ಲೇಡ್.
ಮಂಜೇಶ್ವರ: ಉಪ್ಪಳ ಭಗವತಿಯಲ್ಲಿ ಇಂದು ಬೆಳಗ್ಗೆ ಉದ್ಘಾಟನೆಗೊಂಡ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಚುನಾವಣಾ ಕಛೇರಿ ಮುಂಭಾಗ ಅಳವಡಿಸಿದ್ದ ಪ್ರಚಾರ ಬೋರ್ಡ್ ನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ ವೇಳೆ ಹರಿದು ಹಾಕಿದ ಘಟನೆ ನಡೆದಿದೆ. ನಿನ್ನೆ ಸಂಜೆಯಷ್ಟೇ ಈ ಬೋರ್ಡ್ ನ್ನು ಸ್ಥಾಪಿಸಲಾಗಿತ್ತು, ಇಂದು ಬೆಳಗ್ಗೆ 6.00 ಗಂಟೆ ವೇಳೆ ಸ್ಥಳಕ್ಕೆ ಆಗಮಿಸಿದಾಗ ಬ್ಲೇಡ್ ನಿಂದ ಹರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಬ್ಯಾನರ್ ಹರಿದು ಹಾಕಿದ ಬಗ್ಗೆ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ವಸಂತ್ ಕುಮಾರ್ ಮಯ್ಯ, ಮಣಿಕಂಠ ರೈ, ಕಿಶೋರ್ ಭಗವತೀ ಪುತ್ರ ರವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.