ರಸ್ತೆ ದಾಟುತ್ತಿರುವ ವೇಳೆ ಪಿಕ್ ಅಪ್ ವಾಹನ ಡಿಕ್ಕಿ. ಉದ್ಯಾವರ ನಿವಾಸಿ ಮಧ್ಯ ವಯಸ್ಕ ಅಬ್ದುಲ್ ಹಮೀದ್ (58) ಮೃತ್ಯು.
ಮೇ 08, 2024
0
ರಸ್ತೆ ದಾಟುತ್ತಿರುವ ವೇಳೆ ಪಿಕ್ ಅಪ್ ವಾಹನ ಡಿಕ್ಕಿ. ಉದ್ಯಾವರ ನಿವಾಸಿ ಮಧ್ಯ ವಯಸ್ಕ ಅಬ್ದುಲ್ ಹಮೀದ್ (58) ಮೃತ್ಯು.
ಮಂಜೇಶ್ವರ: ರಸ್ತೆ ದಾಟುತ್ತಿರುವ ವೇಳೆ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದು ಮಧ್ಯ ವಯಸ್ಕರೋರ್ವರು ಮೃತಪಟ್ಟ ಘಟನೆ ಉದ್ಯಾವರ 10 ನೇ ಮೇಲ್ ನಲ್ಲಿ ನಡೆದಿದೆ. ಉದ್ಯಾವರ ನಿವಾಸಿ ದಿವಂಗತ ಕುಂಚ ಎಂಬವರ ಪುತ್ರ ಅಬ್ದುಲ್ ಹಮೀದ್ (58) ಮೃತಪಟ್ಟ ದುರ್ದೈವಿ. ಇವರು ನಮಾಜ್ ಮಾಡಲೆಂದು ಮಸೀದಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಮೃತದೇಹವನ್ನು ಸಮಾಜ ಸೇವಕ ಅಸ್ಲಂರವರ ಆಂಬುಲೆನ್ಸ್ ನಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.