ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವರ್ಷಾವಧಿ ಉತ್ಸವ ಧ್ವಜಾರೋಹಣದೊಂದಿಗೆ ನಾಂದಿ.
ಮೇ 09, 2024
0
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವರ್ಷಾವಧಿ ಉತ್ಸವ ಧ್ವಜಾರೋಹಣದೊಂದಿಗೆ ನಾಂದಿ.
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ನಿನ್ನೆ ರಾತ್ರಿ ಧ್ವಜಾರೋಹಣದೊಂದಿಗೆ ನಾಂದಿ ಹಾಡಲಾಯಿತು.
ನಿನ್ನೆ ರಾತ್ರಿ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕೃಪಾ ವೀರ ಮಾರುತಿ ವ್ಯಾಯಮ ಶಾಲೆಯ ಸದಸ್ಯರಿಂದ ತಾಲೀಮು ಪ್ರದರ್ಶನ ನಡೆಯಿತು. ಬಳಿಕ ಧ್ವಜಾರೋಹಣ ನಡೆಯುವುದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ( ಐತಿಹಾಸಿಕ ಬಂಡಿ ಮಹೋತ್ಸವಕ್ಕೆ ) ಸಂಭ್ರಮದ ಚಾಲನೆ ದೊರಕಿತು. ಬಳಿಕ ಕಂಚಿಲ ಸೇವೆ, ಕಟ್ಟೆ ದೀಪಾರಾಧನೆ ನಡೆಯಿತು. ಇಂದು ಸಂಜೆ 5.30 ರಿಂದ ಶ್ರೀ ಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘ, ಉದ್ಯಾವರ ಮಾಡ ಇವರಿಂದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ. ಬಳಿಕ ಶಬರಿ ಮೆಲೋಡೀಸ್ ಇವರಿಂದ "ಮಾಡ ಜಾತ್ರೆ - 2024 ಮ್ಯೂಸಿಕಲ್ ನೈಟ್" ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 1 ಕ್ಕೆ ಕೊಟ್ಯದಾಯನ ಅಣ್ಣ ದೈವದ ನೇಮ, ಕೆರೆ ದೀಪಾರಾಧನೆ, ನಾಳೆ (10 ರಂದು) ಶುಕ್ರವಾರ ಬೆಳಗ್ಗೆ 9 ಕ್ಕೆ ತಮ್ಮ ದೈವದ ನೇಮ, ಮಧ್ಯಾಹ್ನ 12.00 ಕ್ಕೆ ಮಡಸ್ಥಾನ, ಸಂಜೆ 4.30 ಕ್ಕೆ ಮುಂಡತ್ತಾಯ ದೈವದ ನೇಮ, ಸಂಜೆ 6.30 ಕ್ಕೆ ನಡು ಬಂಡಿ ಉತ್ಸವ, ಅಣ್ಣ ದೈವದ ನೇಮ, 11 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ತಮ್ಮ ದೈವದ ನೇಮ, ಸಂಜೆ 4 ಕ್ಕೆ ಮುಂಡತ್ತಾಯ ದೈವದ ನೇಮ, ಸಂಜೆ 6.30 ಕ್ಕೆ ಕಡೆಬಂಡಿ ಉತ್ಸವ, ತಮ್ಮ ದೈವದ ನೇಮ, ಸುಡುಮದ್ದು ಪ್ರದರ್ಶನ, 14 ರಂದು ಮಂಗಳವಾರ ರಾತ್ರಿ 10 ಕ್ಕೆ ಧ್ವಜಾವರೋಹಣ ನಡೆಯಲಿದೆ.ಛಾಯಾಚಿತ್ರ / ವಿಡಿಯೋ ಕೃಪೆ: ಪವನ್ ಆಚಾರ್ಯ ಮೋರ್ಕಳ.