ಎನ್.ಡಿ. ಎ ಕಾಸರಗೋಡು ಲೋಕಸಭಾ ಅಭ್ಯರ್ಥಿ ಎಂ.ಎಲ್ ಅಶ್ವಿನಿಯವರಿಗೆ ಪಿತೃ ವಿಯೋಗ.
ಮೇ 19, 2024
0
ಎನ್.ಡಿ. ಎ ಕಾಸರಗೋಡು ಲೋಕಸಭಾ ಅಭ್ಯರ್ಥಿ ಎಂ.ಎಲ್ ಅಶ್ವಿನಿಯವರಿಗೆ ಪಿತೃ ವಿಯೋಗ.
ಮಂಜೇಶ್ವರ: ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ, ಎನ್.ಡಿ. ಎ ಕಾಸರಗೋಡು ಲೋಕಸಭಾ ಅಭ್ಯರ್ಥಿಯಾಗಿರುವ ಎಂ.ಎಲ್ ಅಶ್ವಿನಿಯವರ ತಂದೆ ಬೆಂಗಳೂರು ಮಾದನಾಯಕನ ಹಳ್ಳಿ ನಿವಾಸಿ ಲಕ್ಷ್ಮಣ್ ಎ. ಕುಂದರ್ (73) ಇಂದು ಅಪರಾಹ್ನ ನಿಧನರಾದರು.
ಮೃತರು ಕಳೆದ 28 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಬೆಂಗಳೂರಿನಲ್ಲಿ ಲಾರಿ ಬಾಡಿಯ ಹಿರಿಯ ಮೆಕಾನಿಕ್ ರಾಗಿದ್ದಾರೆ, ಮೂಲತಃ ಮಂಗಳೂರಿನ ಕದ್ರಿ ನಿವಾಸಿಯಾಗಿರುವ ಲಕ್ಷ್ಮಣ್ ಕುಂದರ್ ರವರು, ಕಳೆದ 39 ವರ್ಷಗಳಿಂದ ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿ ಪತ್ನಿ, ಮಕ್ಕಳ ಜೊತೆ ವಾಸಿಸುತ್ತಿದ್ದಾರೆ. ಮೃತರು ಪತ್ನಿ: ರೇವತಿ ಎಲ್. ಕುಂದರ್, ಮಕ್ಕಳಾದ: ಎಂ.ಎಲ್ ಅಶ್ವಿನಿ (ಬಿಜೆಪಿ ನೇತಾರೆ), ಅರ್ಚನಾ, ಅನನ್ಯ, ಅಳಿಯಂದಿರಾದ: ಶಶಿಧರ್ ಪಜ್ವ ಕೊಡ್ಲಮೊಗರು, ಪವನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಯ ಹಿರಿಯ ಮಂಗಳಾಗಿರುವ ಎಂ.ಎಲ್ ಅಶ್ವಿನಿಯವರು ಕಳೆದ ಸಲ ನಡೆದ ಮಂಜೇಶ್ವರ ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಬಳಿಕ ಪಕ್ಷದ ಎಲ್ಲಾ ಕಾರ್ಯಚಟುವಟಿಕೆ ಹಾಗೂ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಲಕ್ಷ್ಮಣ್ ಕುಂದರ್ ರ ಪ್ರೋತ್ಸಾಹ ಸದಾ ಬೆನ್ನೆಲುಬಾಗಿತ್ತು. ಅಲ್ಲದೇ ಈ ಬಾರಿ ಎನ್.ಡಿ. ಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಗಳು ಅಶ್ವಿನಿ ಆಯ್ಕೆಗೊಂಡ ವಿಷಯ ತಿಳಿದು, ತುಂಬಾ ಸಂತಸಪಟ್ಟಿದ್ದರು. ಅಲ್ಲದೇ ಮಗಳ ಪರವಾಗಿ ಬೆಂಗಳೂರಿನಲ್ಲಿರುವ ಕಾಸರಗೋಡುಭಾಗದ ಕಾಯಕ ವೃತ್ತಿಯಲ್ಲಿರುವ ತನ್ನ ಸ್ನೇಹಿತ ವರ್ಗದವರಲ್ಲಿ ಮತದಾನಗೈಯಲು ಪ್ರಚಾರ ಕೂಡಾ ಮಾಡಿದ್ದರು. ಇನ್ನೇನು 15 ದಿನಗಳಲ್ಲಿ ಮಗಳ ಫಲಿತಾಂಶ ಹೊರಬೀಳಲಿದ್ದು, ಮಗಳು ಗೆಲ್ಲುವ ಭರವಸೆಯಿಂದ ಕಾತರದಿಂದ ಕಾಯುತ್ತಿದ್ದ ಲಕ್ಷ್ಮಣ್ ಕುಂದರ್ ಇಂದು ಅಗಲಿದ್ದು, ಮನೆ ಮಂದಿ, ಕುಟುಂಬಸ್ಥರು ಶೋಕತಪ್ತರಾಗಿದ್ದಾರೆ.