ಮೂಡಬಿದ್ರೆಯ ಹೋಮ್ ಸ್ಟೇ ಯ ಈಜು ಕೊಳದಲ್ಲಿ ವರ್ಕಾಡಿ ಯುವಕ ಮೃತ್ಯು.
ಮೇ 20, 2024
0
ಮೂಡಬಿದ್ರೆಯ ಹೋಮ್ ಸ್ಟೇ ಯ ಈಜು ಕೊಳದಲ್ಲಿ ವರ್ಕಾಡಿ ಯುವಕ ಮೃತ್ಯು.
ಮಂಜೇಶ್ವರ: ಮೂಡಬಿದ್ರೆಯ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಬೋಗ್ರು ಗುಡ್ಡೆ ಬಳಿ ಇರುವ "ಹೋಮ್ ಸ್ಟೇ" ಯೊಂದರ ಈಜು ಕೊಳದಲ್ಲಿ ಡೈ ಹೊಡೆದ ಯುವಕನೋರ್ವನ ತಲೆಗೆ ಬಲವಾದ ಏಟು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ವರ್ಕಾಡಿಯ ಬೇಕರಿ ಜಂಕ್ಷನ್ ಬಳಿಯ ಪಾಂಜಾರಮೂಲೆ ನಿವಾಸಿ ಕೃಷ್ಣ ಮೂಲ್ಯ - ಗೌರಿ ದಂಪತಿ ಪುತ್ರ ಪುನೀತ್ (29) ಎಂದು ತಿಳಿದು ಬಂದಿದೆ. ಮೃತಪಟ್ಟ ಪುನೀತ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಅವಿವಾಹಿತನಾಗಿದ್ದಾನೆ. ತನ್ನ ಸಹೋದರ ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ದು, ಆತನ ಜೊತೆ ಸೇರಿ ಕುಟುಂಬದ ಸಂಬಂಧಿಕರೊಂದಿಗೆ ಹೋಮ್ ಸ್ಟೇ ಗೆ ತೆರಳಿದ್ದರು. ಇವರ ಪೈಕಿ ಪುನೀತ್ ಈಜು ಕೊಳದಲ್ಲಿ ಈಜುತ್ತಿರುವ ಸಂದರ್ಭ ನೀರಿಗೆ ಡೈ ಹೊಡೆದಿದ್ದಾನೆ. ಈ ವೇಳೆ ಆಯತಪ್ಪಿ ಯುವಕನ ತಲೆ ನೆಲಕ್ಕೆ ಬಡಿದಿದ್ದು, ತೀವ್ರ ತರದ ಗಾಯವಾಗಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದು ಮೂಡಬಿದ್ರೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿದ್ದಾರೆ. ಬಳಿಕ ಮೃತದೇಹವನ್ನು ಮೂಡಬಿದ್ರೆಯ ಆಸ್ಪತ್ರೆಗೆ ಕೊಂಡೊಯ್ದು, ಶವ ಮಹಜರು ನಡೆಸಿ, ಮನೆಯವರಿಗೆ ಬಿಟ್ಟು ಕೊಡಲಾಯಿತು. ಮೃತದೇಹವನ್ನು ಮನೆಗೆ ತಂದು ಬಳಿಕ ಮೊರತ್ತನೆಯ ಸಾರ್ವಜನಿಕ ರುದ್ರ ಭೂಮಿಯಲ್ಲಿ ಸಂಸ್ಕರಿಸಲಾಯಿತು. ಮೃತ ಪುನೀತ್ ತಂದೆ, ತಾಯಿ, ಸಹೋದರರಾದ: ಸಂಜೀತ್, ಅಕ್ಷಿತ್ ರನ್ನು ಅಗಲಿದ್ದಾರೆ. ಮೃತರ ಮನೆಗೆ ಸಾಮಾಜಿಕ ಕಾರ್ಯಕರ್ತರಾದ ಆನಂದ ತಚ್ಚಿರೆ, ವಸಂತ್ ಎಸ್, ವಿವೇಕಾನಂದ ಶೆಟ್ಟಿ ಮೊದಲಾದವರು ಭೇಟಿ ನೀಡಿ, ಮನೆಯವರನ್ನು ಸಂತೈಸಿ, ಸಂತಾಪ ಸೂಚಿಸಿದ್ದಾರೆ.