ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯೋನ್ ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೊರತ್ತನೆ ಬಳಿಯ ಗಾಂಧಿನಗರ ನಿವಾಸಿ ಇ.ಎನ್. ಅಬೂಬಕ್ಕರ್ ಹಾಜಿ (65) ನಿಧನ.
ಜೂನ್ 23, 2024
0
ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯೋನ್ ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೊರತ್ತನೆ ಬಳಿಯ ಗಾಂಧಿನಗರ ನಿವಾಸಿ ಇ.ಎನ್. ಅಬೂಬಕ್ಕರ್ ಹಾಜಿ (65) ನಿಧನ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯೋನ್ (ಶಾಲಾ S.T.M ಸಿಬ್ಬಂದಿ)ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಮೊರತ್ತನೆ ಬಳಿಯ ಗಾಂಧಿನಗರ ನಿವಾಸಿ ಇ.ಎನ್. ಅಬೂಬಕ್ಕರ್ ಹಾಜಿ (65) ಇಂದು ಸಂಜೆ 6:30ಕ್ಕೆ ನಿಧನರಾದರು. ಮೃತರು ಕಳೆದ ಹಲವು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ವರ್ಗಾವಣೆಗೊಂಡು 11 ವರ್ಷಗಳ ಕಾಲ ಪಿಯೋನ್ ರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾಗಿದ್ದರು. ಶಾಲಾ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ, ಶಾಲಾ ಆಡಳಿತ ಮಂಡಳಿಗೆ ಮೆಚ್ಚಿನ ಪಿಯೊನ್ ರಾಗಿ, ಶಾಲೆಯ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೆ ಗಾಂಧಿನಗರ ಬದ್ರಿಯಾ ಜುಮಾ ಮಸೀದಿಯಲ್ಲಿ ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿ, ಕಡಂಬಾರು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಸಾರಮ್ಮ, ಮಕ್ಕಳಾದ: ನವಾಜ್, ರಶೀದ್, ರೌಫ್, ಫೈಜಿ,ರಾಜಿಕ್, ರಮೀಜ, ಹಾಗೂ ಅಳಿಯ, ಸೊಸೆ, ಏಕ ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಅಪರಾಹ್ನ ಗಾಂಧಿನಗರ ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಬಂಗ್ರ ಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ಪಿ.ಟಿ. ಎ ಸಮಿತಿ,
ಗಾಂಧಿನಗರ ಬದ್ರಿಯಾ ಜುಮಾ ಮಸೀದಿ ಹಾಗೂ ಕಡಂಬಾರು ಜುಮ್ಮಾ ಮಸೀದಿ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.