ಸಂಘಪರಿವಾರದ ಮುಖಂಡ ರತೀಶ್ ಶೆಟ್ಟಿ ಪಾವಳ (36) ನಿಧನ.
ಅಕ್ಟೋಬರ್ 22, 2024
0
ಸಂಘಪರಿವಾರದ ಮುಖಂಡ
ರತೀಶ್ ಶೆಟ್ಟಿ ಪಾವಳ (36) ನಿಧನ.
ವರ್ಕಾಡಿ: ಪಾವಳ ಗುತ್ತು
ನಿವಾಸಿ ಹಿರಿಯ ಪ್ರಗತಿಪರ ಕೃಷಿಕ ರಘುನಾಥ ಶೆಟ್ಟಿ - ವಿಜಯಲಕ್ಷ್ಮಿ ದಂಪತಿಯ ಪುತ್ರ ಸಂಘಪರಿವಾರದ ಮುಖಂಡ ರತೀಶ್ ಶೆಟ್ಟಿ ಪಾವಳ (36) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದೆರಡು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ರಾತ್ರಿ ನಿಧಾನರಾದರು. ಮೃತರು ತಂದೆ - ತಾಯಿ, ಹಾಗೂ ಏಕ ಸಹೋದರಿ ರಮ್ಯಾ ಭಂಡಾರಿ, ಅಳಿಯ ಸುಕೇಶ್ ಭಂಡಾರಿ ಪನೀರ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಈ ಹಿಂದೆ ಬಿಲ್ಡಿಂಗ್ ಕಾಂಟ್ರಾಕ್ಟರ್ ರಾಗಿದ್ದು, ಬಳಿಕ ತಂದೆಯ ಜೊತೆ ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಭಾರತೀಯ ಜನತಾಪಕ್ಷ, ಹಾಗೂ ದೇವಸ್ಥಾನ, ಮಂದಿರ, ದೈವಸ್ಥಾನದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಾಗಿದ್ದಾರೆ. ಹಿಂದೂ ಸಮಾಜದಲ್ಲಿ ಯಾವುದೇ ರೀತಿಯ ಜಟಿಲ ಸಮಸ್ಯೆಗಳುಂಟಾದಲ್ಲಿ ಮೊದಲಾಗಿ ತಲುಪಿ, ಸಮಸ್ಯೆ ಬಗೆಹರಿಸುವಲ್ಲಿ ಶ್ರಮವಹಿಸುತ್ತಿದ್ದರು. ವರ್ಕಾಡಿ, ಕರ್ನಾಟಕದ ಗಡಿ ಭಾಗವಾದ ನರಿಂಗಾನ ಪರಿಸರದಲ್ಲಿ ಹೆಸರುವಾಸಿಯಾಗಿದ್ದರು.