ವಿಷಪೂರಿತ ಹಾವು ಕಚ್ಚಿ, ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀಯಪದವು ಪಳ್ಳತಡ್ಕ ನಿವಾಸಿ ಅಶೋಕ್ (43) ನಿಧನ.
ಅಕ್ಟೋಬರ್ 24, 2024
0
ವಿಷಪೂರಿತ ಹಾವು ಕಚ್ಚಿ, ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀಯಪದವು ಪಳ್ಳತಡ್ಕ ನಿವಾಸಿ ಅಶೋಕ್ (43) ನಿಧನ.
ಮಂಜೇಶ್ವರ: ವಿಷಪೂರಿತ ಹಾವು ಕಚ್ಚಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀಯಪದವು ಪಳ್ಳತಡ್ಕ ನಿವಾಸಿ ಅಶೋಕ್ (43) ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಅಶೋಕ್ ರವರು ಮೊನ್ನೆ ಶುಕ್ರವಾರ ರಾತ್ರಿ ಮನೆಗೆ ಬಂದು ಸ್ನಾನ ಮಾಡಿ ಬಚ್ಚಲುಮನೆಯಿಂದ ಹಿಂತಿರುಗುವ ವೇಳೆ ಮನೆಯ ಸಿಟೌಟಿನ ಮೂಲೆಯಲ್ಲಿದ್ದ ವಿಷ ಪೂರಿತ ಹಾವನ್ನು ತುಳಿದ ಕಾರಣ ಹಾವು ಕಡಿಯಿತು. ಕೂಡಲೇ ಮನೆ ಮಂದಿ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಶೋಕ್ ರವರದ್ದು, ಕಡು ಬಡ ಕುಟುಂಬವಾದ ಕಾರಣ ಚಿಕಿತ್ಸೆಯ ಮೊತ್ತ ಬರಿಸಲು ಮನೆಯವರಿಗೆ ಅಸಾಧ್ಯವಾದ ಕಾರಣ ಸಾಮಾಜಿಕ ಜಾಲ ತಾಣಗಳ ಮೂಲಕ ಹೆಚ್ಚಿನ ಚಿಕಿತ್ಸೆಯ ಮೊತ್ತಕ್ಕಾಗಿ ದಾನಿಗಳ ನೆರವನ್ನು ಯಾಚಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವ ವೇಳೆ ಅಶೋಕ್ ರವರು ಇಂದು ಮುಂಜಾನೆ ನಿಧನರಾದರು. ಮೃತರು ದಿ. ದಾದು ಮೂಲ್ಯ - ಲಲಿತಾ ದಂಪತಿಗಳ ಪುತ್ರನಾಗಿದ್ದು, ತಾಯಿ ಸೇರಿದಂತೆ, ಪತ್ನಿ: ಪ್ರಮೀಳಾ, ಮಕ್ಕಳಾದ: ಪ್ರಜ್ವಲ್, ಧನ್ಯ, ಸಹೋದರ - ಸಹೋದರಿಯರಾದ: ಪ್ರಕಾಶ್, ರವೀಂದ್ರ, ಪ್ರೇಮಾ, ಮಮತಾ, ಹೇಮಲತಾ, ರೇಖಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಿಜೆಪಿ ಬೇರಿಕೆ ಬೂತ್ ನ ಸಕ್ರೀಯ ಕಾರ್ಯಕರ್ತರಾಗಿರುವ ಅಶೋಕ್ ರ ಆಕಸ್ಮಿಕ ನಿಧನ ನಾಡಿನಲ್ಲಿ ಶೋಕ ಸಾಗರ ಮೂಡಿಸಿದೆ. ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶವ ಮಹಜರಿನ ಬಳಿಕ ಮೃತದೇಹವನ್ನು ಅಪರಾಹ್ನ 1 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಬೇರಿಕೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೂಲಿ ಕೆಲಸ ಮಾಡಿ ಬರುವ ಕಿಂಚಿತ್ ಆದಾಯದಿಂದ ಪತ್ನಿ ಮಕ್ಕಳ ಜೊತೆ ಬಡ ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದ ಅಶೋಕ್ ರ ಅಕಾಲ ನಿಧನದಿಂದಾಗಿ ಮನೆಯ ಆಧಾರ ಸ್ಥಂಭ ಇದೀಗ ಕಳಚಿದಂತಾಗಿದೆ.