ಸಿ.ಪಿ.ಐ (ಎಂ) ಮಂಜೇಶ್ವರ ಲೋಕಲ್ ಸಮ್ಮೇಳನದಂಗವಾಗಿ ಹೊಸಂಗಡಿ ಯೂನಿಟಿ ಹಾಲ್ ನಲ್ಲಿ ಪ್ರತಿನಿಧಿ ಸಭೆ ಹಾಗೂ ಸಾರ್ವಜನಿಕ ಸಭೆ.
ಅಕ್ಟೋಬರ್ 25, 2024
0
ಸಿ.ಪಿ.ಐ (ಎಂ) ಮಂಜೇಶ್ವರ ಲೋಕಲ್ ಸಮ್ಮೇಳನದಂಗವಾಗಿ ಹೊಸಂಗಡಿ ಯೂನಿಟಿ ಹಾಲ್ ನಲ್ಲಿ ಪ್ರತಿನಿಧಿ ಸಭೆ ಹಾಗೂ ಸಾರ್ವಜನಿಕ ಸಭೆ.
ಮಂಜೇಶ್ವರ: ಸಿ.ಪಿ.ಐ (ಎಂ) ಮಂಜೇಶ್ವರ ಲೋಕಲ್ ಸಮ್ಮೇಳನ ಹೊಸಂಗಡಿ ಯೂನಿಟಿ ಹಾಲ್ ನಲ್ಲಿ ನಡೆಯಿತು. ಪ್ರತಿನಿಧಿ ಸಮ್ಮೇಳನ ಕಾ| ಚಂದಪ್ಪ ಮಾಸ್ಟರ್ ನಗರದಲ್ಲಿ ಜಿಲ್ಲಾ ಕಮಿಟಿ ಸದಸ್ಯ ಕೆ ಮಣಿಕಂಠನ್ ಉದ್ಘಾಟನೆ ಮಾಡಿದರು. ಕಾ| ಬೇಬಿ ಬಾಲಕೃಷ್ಣನ್, ಗೀತಾ ಸಾಮನಿ ಕಾ| ಚಂದ್ರಹಾಸ ಶೆಟ್ಟಿ ಮಾಸ್ಟರ್ ಉಪಸ್ಥಿತರಿದ್ದರು. ಲೋಕಲ್ ಕಮಿಟಿ ಸದಸ್ಯರಾದ ಪ್ರೇಮ ಹೊಸಬೆಟ್ಟು ಧ್ವಜಾರೋಹಣ ನೆರವೇರಿಸಿದರು. ತಾತ್ಕಾಲಿಕ ಅಧ್ಯಕ್ಷರಾಗಿ ದಯಾಕರ.ಕೆ ವಹಿಸಿದರು. ವಿಜಯ ಕನಿಲ, ಪ್ರೇಮ ಹೊಸಬೆಟ್ಟು, ಯತೀಶ್ ಕಾಜೂರು ಮುಂತಾದವರು ಮಾತನಾಡಿದರು. ಪಾರ್ಟಿ ಏರಿಯಾ ಕಮಿಟಿ ಸದಸ್ಯರಾದ ಕೆ. ಕಮಲಾಕ್ಷ, ಪ್ರಶಾಂತ್ ಕನಿಲ ಉಪಸ್ಥಿತರಿದ್ದರು. ಈ ವೇಳೆ 11 ಮಂದಿ ಸದಸ್ಯರ ನೂತನ ಲೋಕಲ್ ಕಮಿಟಿ ರೂಪಿಕರಿಸಲಾಯಿತು. ಲೋಕಲ್ ಕಮಿಟಿಯ ನೂತನ ಕಾರ್ಯದರ್ಶಿಯಾಗಿ ಕರುಣಾಕರ ಶೆಟ್ಟಿ ಅವರು ಅವಿರೋಧವಾಗಿ ಮರು ಆಯ್ಕೆಯಾದರು. ರಕ್ತ ಸಾಕ್ಷಿ ಪ್ರಮೇಯವನ್ನು ಲೋಹಿತ್ ಕುಮಾರ್ ಬಿ.ಎಂ ವಾಚಿಸಿದರು. ಶ್ರದ್ಧಾಂಜಲಿ ಪ್ರಮೇಯವನ್ನು ಗಂಗಾಧರ ದುರ್ಗಿಪಳ್ಳರವರು ವಾಚಿಸಿದರು. ಸಮ್ಮೇಳನದ ಪ್ರಯುಕ್ತ ಸಾರ್ವಜನಿಕ ಸಭೆ ಕಾ| ಕೆ. ಕೃಷ್ಣ ಶೆಟ್ಟಿಗಾರ್ ನಗರದಲ್ಲಿ ಜರಗಿತು. ಸಭೆಯ ಉದ್ಘಾಟನಾ ಭಾಷಣವನ್ನು ಸಿ.ಪಿ.ಐ.ಎಂನ ಜಿಲ್ಲಾ ಕಮಿಟಿ ಸದಸ್ಯರಾದ ಕೆ. ಮಣಿಕಂಠನ್ ಊದ್ಘಾಟಿಸಿದರು. ಏರಿಯಾ ಕಮಿಟಿ ಸದಸ್ಯರಾದ ಕಮಲಾಕ್ಷ .ಕೆ ರವರು ಅಧ್ಯಕ್ಷತೆ ವಹಿಸಿದರು. ಏರಿಯಾ ಕಮಿಟಿ ಸದಸ್ಯರಾದ ಪ್ರಶಾಂತ್ ಕನಿಲ ಉಪಸ್ಥಿತರಿದ್ದರು. ಲೋಕಲ್ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಹಾಗೂ L.C ಸದಸ್ಯರಾದ ಗಂಗಾಧರ ದುರ್ಗಿಪಳ್ಳ, ದಯಾಕರ. ಕೆ, ಪ್ರೇಮ ಹೊಸಬೆಟ್ಟು, ಅಂದು ಬಿ.ಎಂ, ಲೋಹಿತ್ ಕುಮಾರ್, ಬಿ.ಎಂ ಪ್ರವೀಣ್ ಕನಿಲ ಭಾಗವಹಿಸಿದರು. ಕಾಸರಗೋಡಿನ ಗಡಿ ಪ್ರದೇಶದ ಜನರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಠರಾವು ಮಂಡಿಸಲಾಯಿತು.