ವರ್ಕಾಡಿ ವಿದ್ಯುತ್ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಕಂಟ್ರಾಕ್ಟರ್ ಗಳ ದಬ್ಬಾಳಿಕೆ ವಿರುದ್ಧ ಸಿಪಿಎಂ ವರ್ಕಾಡಿ ಹಾಗೂ ಕೊಡ್ಲಮೊಗರು ಲೋಕಲ್ ಸಮಿತಿಯಿಂದ ಬಹುಜನ ಮಾರ್ಚ್ ಹಾಗೂ ಧರಣಿ.
ಮೇ 09, 2025
0
ವರ್ಕಾಡಿ ವಿದ್ಯುತ್ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಕಂಟ್ರಾಕ್ಟರ್ ಗಳ ದಬ್ಬಾಳಿಕೆ ವಿರುದ್ಧ ಸಿಪಿಎಂ ವರ್ಕಾಡಿ ಹಾಗೂ ಕೊಡ್ಲಮೊಗರು ಲೋಕಲ್ ಸಮಿತಿಯಿಂದ ಬಹುಜನ ಮಾರ್ಚ್ ಹಾಗೂ ಧರಣಿ.
ಮಂಜೇಶ್ವರ: ವರ್ಕಾಡಿ ವಿದ್ಯುತ್ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಕಂಟ್ರಾಕ್ಟರ್ ಗಳ ದಬ್ಬಾಳಿಕೆಗೆ ಎದುರಾಗಿ ಸಿಪಿಎಂ ವರ್ಕಾಡಿ ಹಾಗೂ ಕೊಡ್ಲಮೊಗರು ಲೋಕಲ್ ಸಮಿತಿ ನೇತೃತ್ವದಲ್ಲಿ ವರ್ಕಾಡಿ ವಿದ್ಯುತ್ ಕಚೇರಿ ಮುಂಭಾಗ ಬಹುಜನ ಮಾರ್ಚ್ ಹಾಗೂ ಧರಣಿ ಇಂದು ಬೆಳಗ್ಗೆ ನಡೆಯಿತು. ಧರಣಿಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಆರ್ ಜಯಾನಂದ ಉಧ್ಘಾಟಿಸಿದರು. ಅವರು ಮಾತನಾಡಿ "ವರ್ಕಾಡಿ ವಿದ್ಯುತ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಮಾಡುವ ಗುತ್ತಿಗೆದಾರನಿಗೆ ಕೆಲವು ನೌಕರರು ಬೆಂಬಲ ನೀಡುತ್ತಿದ್ದಾರೆ. ಇದನ್ನು ಕೂಡಲೇ ಕೊನೆಗೊಳಿಸಬೇಕು. ಭ್ರಷ್ಟಾಚಾರ ನಡೆಸುವ ಯಾರೇ ಆದರೂ ಅವರಿಗೆ ಸರಕಾರಿ ನೌಕರನಾಗಿ ಮುಂದುವರಿಯಲು ಸಾಧ್ಯವಿಲ್ಲ., ಹಾಗೂ ಗುತ್ತಿಗೆದಾರನ ದಬ್ಬಾಳಿಕೆ ಇಲ್ಲಿ ನಡೆಯಲಾರದು ಎಂದು ಎಚ್ಚರಿಕೆ ನೀಡಿದರು. ಪಕ್ಷದ ಏರಿಯಾ ಸಮಿತಿ ಸದಸ್ಯರಾದ ಭಾರತಿ. ಎಸ್ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಸಮಿತಿ ಸದಸ್ಯರಾದ ನವೀನ್ ಕುಮಾರ್, ಹಿರಿಯ ನೇತಾರರಾದ ಡಿ. ಬೂಬ ಮೊದಲಾದವರು ಮಾತನಾಡಿದರು. ಲೋಕಲ್ ಕಾರ್ಯದರ್ಶಿ ಸಿದ್ಧಿಕ್ ಪಾವೂರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಏರಿಯಾ ಸಮಿತಿ ಸದಸ್ಯರಾದ ಗೀತಾ ವಿ. ಸಾಮಾನಿ, ಕರುಣಾಕರ ಶೆಟ್ಟಿ, ರಾಮಚಂದ್ರ. ಟಿ, ಕಮಲಾಕ್ಷ. ಡಿ, ಲೋಕೇಶ್ ಚಿನಾಲ, ಲೋಕಲ್ ಸಮಿತಿ ಸದಸ್ಯರಾದ ಚಂದ್ರಹಾಸ ಕಾನ, ಮೊಯ್ದಿನ್ ಕುಂಞ, ಸಿ. ಕೆ ಖಾದರ್, ಸುಂದರ ಜೋಗಿಬೆಟ್ಟು, ನಾಗೇಶ್ ಎಂ, ಮಾಲತಿ. ಕೆ, ಅಶೋಕ್ ಮೊಂತೆರೋ, ಅಕ್ಷಯ್ ಕುಮಾರ್,
ಭಾರತಿ ತಚ್ಚಿರೆ ಮೊದಲಾದವರು ನೇತೃತ್ವ ನೀಡಿದರು.