ಮುಸ್ಲಿಂ ಲೀಗ್ ನೇತಾರನ ಪೋಕ್ಸೋ ಪ್ರಕರಣ ಸಮಗ್ರ ತನಿಖೆಗೆ ಬಿಜೆಪಿ ಮಂಜೇಶ್ವರ ಅಗ್ರಹ.
ಜೂನ್ 30, 2025
0
ಮುಸ್ಲಿಂ ಲೀಗ್ ನೇತಾರನ ಪೋಕ್ಸೋ ಪ್ರಕರಣ ಸಮಗ್ರ ತನಿಖೆಗೆ ಬಿಜೆಪಿ ಮಂಜೇಶ್ವರ ಅಗ್ರಹ.
ಮಂಜೇಶ್ವರ: ಕುಂಜತ್ತೂರು ಕುಚ್ಚಿಕಾಡ್ ನಲ್ಲಿ 11 ವರ್ಷ ಪ್ರಾಯದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಲೀಗ್ ನೇತಾರನನ್ನು ಬಂಧಿಸಿದರೂ, ಮುಸ್ಲಿಂಲೀಗ್ ಪಕ್ಷವಾಗಲಿ ಮಂಜೇಶ್ವರ ಶಾಸಕರಾಗಲಿ ಪ್ರಕರಣವನ್ನು ಖಂಡಿಸಿಲ್ಲ ಮಾತ್ರವಲ್ಲ ಆರೋಪಿಯ ರಕ್ಷಣೆಗೆ ತೆರೆ ಮೆರೆಯಲ್ಲಿ ಮಾಡುವ ತಂತ್ರಗಳು ಖಂಡನಿಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಪ್ರಕರಣದ ಆರೋಪಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಅವನ ಅಂಗಡಿಗೆ ಬರುವ ಬೇರೆ ಮಕ್ಕಳನ್ನು ಕೌನ್ಸಿಲಿಂಗ್ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಬಿಜೆಪಿ ಅಗ್ರಹಿಸಿದೆ. ಪ್ರಕರಣದ ಗಂಭೀರತೆ ಶಾಸಕರು ಹಾಗೂ ಪೊಲೀಸ್ ಇಲಾಖೆ ನಿಭಾಯಿಸದಿದ್ದಲ್ಲಿ ಸಮಾಜದಲ್ಲಿ ಹಾಳಾಗುವ ಕೋಮು ಸಾಮರಸ್ಯ ಇಲ್ಲವಾಗುತ್ತದೆ. ಹಿಂದೂ ಯುವತಿಯರನ್ನು ಹೆಣ್ಣು ಮಕ್ಕಳನ್ನು ಚೂಡಾಯಿಸುವ ಪ್ರಕ್ರಿಯೆ ಉದ್ದೇಶ ಪೂರ್ವಕ ಎಂದು ಮತ್ತು ಅಜೆಂಡಾದ ಭಾಗ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ.ಎಂ ಗಂಭೀರ ಆರೋಪ ಮಾಡಿದ್ದಾರೆ. ಇದೆ ರೀತಿಯ ಪ್ರಕರಣ ಬೇರೆ ಮತದವರ ಮೇಲೆ ಆಗಿದ್ದರೆ ಇದೆ ಶಾಂತಿಯ ಬೆಳವಣಿಗೆ ಕಾಣಲು ಸಾಧ್ಯವೇ ಎಂದು ಬಿಜೆಪಿ ಪ್ರಶ್ನೆಸಿದೆ. ಮುಸ್ಲಿಂ ಲೀಗ್ ಪೋಕ್ಸೋ ಆರೋಪಿಯನ್ನು ಬೆಂಬಲಿಸುವ ಮನಸ್ಥಿತಿ ಬಿಟ್ಟು ಧಾರ್ಮಿಕ ನೈತಿಕತೆಯಿಂದ ಲೀಗ್ ಆರೋಪಿಯನ್ನು ಪಕ್ಷದಿಂದ ವಜಾಗೊಳಿಸಿಬೇಕು. ಹಾಗೂ ಶಾಸಕರು ಇದರ ಬಗ್ಗೆ ಮೌನ ಮುರಿಯಬೇಕು ಎಂದು ಬಿಜೆಪಿ ಅಗ್ರಹಿಸಿದೆ.