ವಿಕಲ ಚೇತನ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣ: ಮಂಜೇಶ್ವರದ ಮುಸ್ಲಿಂ ಲೀಗ್ ಮುಖಂಡ ಪೋಕ್ಸೋ ಕಾಯ್ದೆಯಡಿ ಬಂಧನ.
ಜೂನ್ 30, 2025
0
ವಿಕಲ ಚೇತನ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣ: ಮಂಜೇಶ್ವರದ ಮುಸ್ಲಿಂ ಲೀಗ್ ಮುಖಂಡ ಪೋಕ್ಸೋ ಕಾಯ್ದೆಯಡಿ ಬಂಧನ.
ಮಂಜೇಶ್ವರ: ಅಂಗಡಿಗೆ ಸಾಮಾಗ್ರಿ ಖರೀದಿಸಲು ಬಂದ ವಿಕಲ ಚೇತನ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದಲ್ಲಿ ಮುಸ್ಲಿಂ ಲೀಗ್ ಮುಖಂಡನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ಶೇಖ್ ಅಬ್ಬ (57) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಮಂಜೇಶ್ವರ ಪೊಲೀಸರು ಕುಂಜತ್ತೂರಿನಿಂದ ಬಂಧಿಸಿದ್ದಾರೆ. ಕುಂಜತ್ತೂರು ಬಳಿ ಅಂಗಡಿ ಹೊಂದಿರುವ ಆರೋಪಿ, ಸಾಮಾಗ್ರಿ ಖರೀದಿಸಲು ಬಂದ 11 ವರ್ಷದ ವಿಕಲ ಚೇತನ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದನೆನ್ನಲಾಗಿದೆ. ಬಾಲಕಿ ಈ ವಿಷಯ ಹೆತ್ತವರಲ್ಲಿ ತಿಳಿಸಿದ್ದಳು. ಅಲ್ಲದೆ ಸಾಯಂಕಾಲವಾದೊಡನೆ ಬಾಲಕಿಗೆ ತೀವ್ರ ಜ್ವರವೂ ಬಂತು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅದರಂತೆ ಪೋಕ್ಸ್ ಕಾಯ್ದೆ ಪ್ರಕಾರ ಆರೋಪಿಯ ಬಂಧನ ನಡೆದಿದೆ.