ಜುಲೈ 9 ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರದ ಪ್ರಚಾರಾರ್ಥ ಐಕ್ಯ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮಂಜೇಶ್ವರದಿಂದ ಹೊಸಂಗಡಿಗೆ ಕಾಲ್ನಡೆ ಜಾಥ.
ಜುಲೈ 04, 2025
0
ಜುಲೈ 9 ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರದ ಪ್ರಚಾರಾರ್ಥ ಐಕ್ಯ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮಂಜೇಶ್ವರದಿಂದ ಹೊಸಂಗಡಿಗೆ ಕಾಲ್ನಡೆ ಜಾಥ.
ಮಂಜೇಶ್ವರ: ಐಕ್ಯ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ರೈಲ್ವೆ ನಿಲ್ದಾಣ ಬಳಿಯಿಂದ ಹೊಸಂಗಡಿವರೆಗೆ ಜುಲೈ 9 ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರದ ಪ್ರಚಾರಾರ್ಥ ಕಾಲ್ನಡೆ ಜಾಥ ನಡೆಸಲಾಯಿತು. ಹೊಸಂಗಡಿಯಲ್ಲಿ ಜಾಥ ಸಮಾಪನ ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಕಾಂ. ಬೇಬಿ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ದೇಶದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಕಾರ್ಮಿಕ ವಿರೋಧಿ ನೀತಿಗೆದುರಾಗಿ 16 ಬೇಡಿಕೆ ಮುಂದಿಟ್ಟು ನಡೆಸುವ ಸಾರ್ವತ್ರಿಕ ಮುಷ್ಕರ ವ್ಯವಸಾಯ, ವ್ಯಾಪಾರ, ಕಾರ್ಮಿಕರು ಜುಲೈ 9 ರಂದು ಒಂದು ದಿನ ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಎಐಟಿಯುಸಿ ಮುಖಂಡ ಮುಸ್ತಾಫ ಕಡಂಬಾರ್ ವಹಿಸಿದರು. ನೇತಾರರಾದ ಕೆ ಕಮಲಾಕ್ಷ, ಪ್ರಶಾಂತ್ ಕನಿಲ, ಕರುಣಾಕರ ಶೆಟ್ಟಿ, ಶ್ರೀಧರ್ ಮಾಡ , ಉಮೇಶ್ ತುಮೀನಾಡು, ದಯಾಕರ ಮಾಡ ಮೊದಲಾದವರು ಉಪಸ್ಥಿತರಿದ್ದರು. ರಾಮಚಂದ್ರ ಬಡಾಜೆ ಸ್ವಾಗತಿಸಿದರು.