ಕೋಟ್ಟಯಂ ಮೆಡಿಕಲ್ ಕಾಲೇಜು ಕಟ್ಟಡ ಕುಸಿತದಲ್ಲಿ ಯುವತಿ ದುರ್ಮರಣ. ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮಂಜೇಶ್ವರ ಮಂಡಲದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ.
ಜುಲೈ 05, 2025
0
ಕೋಟ್ಟಯಂ ಮೆಡಿಕಲ್ ಕಾಲೇಜು ಕಟ್ಟಡ ಕುಸಿತದಲ್ಲಿ ಯುವತಿ ದುರ್ಮರಣ.
ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮಂಜೇಶ್ವರ ಮಂಡಲದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ.
ಮಂಜೇಶ್ವರ: ಕೋಟ್ಟಯಂ ಮೆಡಿಕಲ್ ಕಾಲೇಜಿನ ಕಟ್ಟಡ ಕುಸಿತದಿಂದ ಬಿಂದು ಎಂಬ ಯುವತಿ ದುರ್ಘಟನೆಯಾಗಿ ಮೃತಪಟ್ಟಿದ್ದು, ಇದು ಗಂಭೀರ ನಿರ್ಲಕ್ಷ್ಯದ ಫಲವಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ವೀಣಾ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಮಂಜೇಶ್ವರ ಕಾಂಗ್ರೆಸ್ ಮಂಡಲ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಪಡಿಂಜಾರ್ ನೇತೃತ್ವ ನೀಡಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಅಧ್ಯಕ್ಷ ಕೃಷ್ಣ ಅಡ್ಕತೊಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಶ್ ಮಂಜೇಶ್ವರ, ಮನ್ಸೂರ್ ಬಿ.ಎಂ., ಬ್ಲಾಕ್ ಕಾರ್ಯದರ್ಶಿ ಮಾಲಿಂಗ, ರಂಜಿತ್, ಮಂಡಲ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಜೆಸ್ಸಿ ಅನಿಲ್ ಮಾತನಾಡಿದರು. ಅಬ್ದುಲ್ ರಹ್ಮಾನ್ ಹಾಜಿ, ಅಬ್ದುಲ್ಲ ದಿಲ್ದಾರ್, ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಮುಸ್ತಫಾ, ವಾರ್ಡ್ ಅಧ್ಯಕ್ಷ ಇಸ್ಮಾಯಿಲ್ ಎಂ.ಕೆ., ಸೂಫಿ ಜಮಾಲ್, ಫೈರೋಸ್ ಮತ್ತು ಅಫ್ತಾಬ್ ಮುಂತಾದವರು ಉಪಸ್ಥಿತರಿದ್ದರು.