KPCC ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ನಾಳೆ ಉಪ್ಪಳದಲ್ಲಿ.
ಜುಲೈ 05, 2025
0
KPCC ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ನಾಳೆ ಉಪ್ಪಳದಲ್ಲಿ.
ಉಪ್ಪಳ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಲಾ ಸಾಂಸ್ಕೃತಿಕ ಘಟಕವಾದ ಸಂಸ್ಕಾರ ಸಾಹಿತಿ ಇದರ ಮಂಜೇಶ್ವರ ಅಸೆಂಬ್ಲಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಧನಾಶೀಲರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಾಳೆ (ಜುಲೈ 6 ರಂದು ಆದಿತ್ಯವಾರ) ಅಪರಾಹ್ನ 3 ಗಂಟೆಗೆ ಉಪ್ಪಳ ಕೈಕಂಬದ ಪಂಚಮಿ ಹಾಲ್ ಸಭಾಂಗಣದಲ್ಲಿ ಜರುಗಲಿದೆ. ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಂಕಬೈಲು ಸತೀಶ್ ಅಡಪ್ಪರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ ಕಾರ್ಯದರ್ಶಿ ಅಡ್ವಕೇಟ್ ಬಿ. ಸುಬ್ಬಯ್ಯ ರೈ ಯವರು ಉದ್ಘಾಟಿಸಲಿರುವರು. ಕಾರ್ಯಕ್ರಮದಲ್ಲಿ ಸಂಸ್ಕಾರ ಸಾಹಿತಿಯ ರಾಜ್ಯ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಲಿರುವರು. ಈ ವೇಳೆ ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪೈವಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಸಾದರ್ ಹುಸೈನ್ ಮಂಗಲ್ಪಾಡಿ, ಕೋಶಾಧಿಕಾರಿಯಾಗಿ ವೇದಾವತಿ ವರ್ಕಾಡಿ ಅಧಿಕಾರ ಸ್ವೀಕರಿಸಲಿರುವರು.