ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷಾರ್ಚನೆ ಕಾರ್ಯಕ್ರಮ ನಾಳೆ.
ನವೆಂಬರ್ 17, 2023
0
ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷಾರ್ಚನೆ ಕಾರ್ಯಕ್ರಮ ನಾಳೆ.
ಮಂಜೇಶ್ವರ: ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷಾರ್ಚನೆ ಕಾರ್ಯಕ್ರಮ ನಾಳೆ 19 - 11 - 2023 ನೇ ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ನಿನ್ನೆ ಸಂಜೆ ಕಡಂಬಾರು ಶ್ರೀ ಮಹಾ ವಿಷ್ಣುಮೂರ್ತಿ ಭಜನಾ ಸಂಘದಲ್ಲಿ ಊರಿನ ಸಮಸ್ತ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪವಿತ್ರ ತುಳಸಿದಳಯುಕ್ತ ಹಸಿರು ಹೊರೆ ಕಾಣಿಕೆ ಶ್ರೀ ಕ್ಷೇತ್ರಕ್ಕೆ ಹರಿದು ಬಂತು. ಈ ವೇಳೆ ಮಕ್ಕಳಿಂದ ಕುಣಿತ ಭಜನೆ ಹಾಗೂ ಕ್ಷೇತ್ರದ ಮಹಿಳಾ ಸಂಘ, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೆರವಣಿಗೆಯು ನಡೆಯಿತು. ಭಕ್ತರಿಂದ ತುಳಸಿದಳ ಸಮರ್ಪಣೆಬಳಿಕ ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ, ರಾತ್ರಿ ಶ್ರೀ ವಿಷ್ಣು ಸಹಸ್ರನಾಮ ಪಠಣೆ ನಡೆಯಿತು. ನಾಳೆ ಬೆಳಿಗ್ಗೆ 6 ಕ್ಕೆ ಪ್ರಾರ್ಥನೆ, 7 ಕ್ಕೆ ಗಣಹೋಮ, 7:30 ನವಕ ಕಲಶಾಭಿಷೇಕ, 8.00 ಕ್ಕೆ ಲಕ್ಷಾರ್ಚನೆ ಪ್ರಾರಂಭ, 11:30 ಕ್ಕೆ ಸಾಮೂಹಿಕ ಭಗವದ್ಗೀತೆ ಪಾರಾಯಣ (15ನೇ ಅಧ್ಯಾಯ), 11:40 ಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಜಿಯವರಿಂದ ಆಶೀರ್ವಚನ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.