ಹಂಪಿ ನಗರಿಯಲ್ಲಿ ಕಾಸರಗೋಡಿನ ರಂಗ ಚೇತನದ ಚಿಣ್ಣರ ಕಲರವ.
ನವೆಂಬರ್ 21, 2023
0
ಹಂಪಿ ನಗರಿಯಲ್ಲಿ ಕಾಸರಗೋಡಿನ ರಂಗ ಚೇತನದ ಚಿಣ್ಣರ ಕಲರವ.
ಮಂಜೇಶ್ವರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾದ ಹಂಪಿಯ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹಂಪಿ ಇಲ್ಲಿ ಜರಗಿದ ಅಖಿಲ ಭಾರತ ಕಲಾ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನ ಶ್ರೀ ವಾಣಿ ವಿಜಯ ಹೈಸ್ಕೂಲಿನ ರಂಗ ಚೇತನ ಕಾಸರಗೋಡು ಇದರ ಚಿಣ್ಣರ ತಂಡದಿಂದ ಶ್ರೀ ಸದಾಶಿವ ಬಾಲಮಿತ್ರರವರು ರಚಿಸಿ ನಿರ್ದೇಶಿಸಿದ ಒಪ್ಪಂದ ನಾಟಕವು ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆಗುವ ಪ್ರಯೋಜನವನ್ನು , ನವೀನ ಯುಗದ ನವ್ಯ ಆಹಾರ ಪದ್ಧತಿ ತರುವ ಆರೋಗ್ಯ ಸಮಸ್ಯೆಗಳ ಸುತ್ತ ಹೆಣೆದ " ಒಪ್ಪಂದ ನಾಟಕದಲ್ಲಿ ಶರಣ್ಯ,ಸ್ವಾತಿ ಶೆಟ್ಟಿ, ನಿರೀಕ್ಷಾ,ಸಿಂಚನಾ ಪಿ .ಎಸ್,ವರ್ಷ ,ಮೋನಿಶ್, ಮನೀಶ್ ಪಿ ಜಿ,ಅನ್ನಾ ಅಲೀಶಾ ಡಿಸೋಜ ನಿಶ್ಮಿತಾ ರವರ ಅಭಿನಯ ಮನೋಜ್ಞವಾಗಿತ್ತು.
ನಾಟಕವನ್ನು ವೀಕ್ಷಣೆ ಮಾಡಿದ ಸಂಘಟನೆಯ ಪದಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿಸಿದರು . ನಾಟಕ ತಂಡಕ್ಕೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ರಂಗ ಚೇತನ ತಂಡದ ಪದಾಧಿಕಾರಿಗಳಾದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು , ಜತೆ ಕಾರ್ಯದರ್ಶಿ ವಸಂತ ಮಾಸ್ಟರ್ ಮೂಡಂಬೈಲ್, ಶಿವಪ್ರಸಾದ್ ಪೈವಳಿಕೆ, ಶಾಲಾ ಶಿಕ್ಷಕರಾದ ಮಧು ಶ್ಯಾಮ್, ಉದಯ ಶೆಟ್ಟಿ, ಸಂದೀಪ್ ಬಲ್ಲಾಳ್, ಭವಾನಿ ಶಂಕರ್, ಆರತಿ ಟೀಚರ್ ಮುಂತಾದವರು ಭಾಗವಹಿಸಿದ್ದರು.