ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ತಿರುವಿಳಕ್ ಮಹೋತ್ಸವದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ.
ನವೆಂಬರ್ 21, 2023
0
ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ತಿರುವಿಳಕ್ ಮಹೋತ್ಸವದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ.
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮೀಪದ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ವತಿಯಿಂದ ನಡೆಯುವ 58 ನೇ ವರ್ಷದ ತಿರುವಿಳಕ್ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಎಡನೀರು ಶ್ರೀಸಚ್ಚಿದಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಡಿ.7 ರಿಂದ 10 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 58 ನೇ ವರ್ಷದ ತಿರುವಿಳಕ್ ಉತ್ಸವ ಜರಗಲಿದೆ. ಸಮಿತಿಯ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷರಾದ ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರ.ಕಾರ್ಯದರ್ಶಿ ಸುರೇಶ್ ಸುವರ್ಣ, ಜತೆ ಕಾರ್ಯದರ್ಶಿ ಮಹೇಶ್ ನೆಲ್ಲಿಕುಂಜೆ, ಕರುಣಾಕರ ಗುರುಸ್ವಾಮಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.