ಮಂಜೇಶ್ವರ ರೈಲ್ವೇ ಸ್ಟೇಷನ್ ನ ಸ್ಥಿತಿಗತಿಗಳನ್ನು ಅವಲೋಕಿಸಲು ಆಗಮಿಸಿದ ಸಂಸದ ರಾಜ್ ಮೋಹನ್ ಉನ್ನಿತ್ತಾನ್ ರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟಿಸಿದ ಎಸ್.ಡಿ. ಪಿ.ಐ ಕಾರ್ಯಕರ್ತರು.
ನವೆಂಬರ್ 27, 2023
0
ಮಂಜೇಶ್ವರ ರೈಲ್ವೇ ಸ್ಟೇಷನ್ ನ ಸ್ಥಿತಿಗತಿಗಳನ್ನು ಅವಲೋಕಿಸಲು ಆಗಮಿಸಿದ ಸಂಸದ ರಾಜ್ ಮೋಹನ್ ಉನ್ನಿತ್ತಾನ್ ರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟಿಸಿದ ಎಸ್.ಡಿ. ಪಿ.ಐ ಕಾರ್ಯಕರ್ತರು.
ಮಂಜೇಶ್ವರ: ಇಂದು ಅಪರಾಹ್ನ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ರಾಜಮೋಹನ್ ಉನ್ನಿತ್ತಾನ್ ರಿಗೆ ಎಸ್.ಡಿ.ಪಿ.ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟಿಸಿದ ಘಟನೆ ನಡೆದಿದೆ. ರೈಲು ನಿಲ್ದಾಣದ ಬಗ್ಗೆ ಕಿಂಚತ್ತೂ ಗಮನ ಹರಿಸದೇ ಕೇವಲ ವೋಟ್ ಬ್ಯಾಂಕ್‌ನ ಉದ್ದೇಶದಿಂದ ಸಂಸದರ ಭೇಟಿಯಾಗಿದೆ ಎಂದು ಆರೋಪಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಸಂಸದರ ವಿರುದ್ಧ ದಿಕ್ಕಾರ ಕೂಗಿ ಕೊಂಡು ಪ್ರತಿಭಟನೆ ನಡೆಸಿದರು. ಸಂಸದ ರಾಜಮೋಹನ್ ಉನ್ನಿತ್ತಾನ್ ಇಂದು ಮಧ್ಯಾಹ್ನ 2.30ರ ಸುಮಾರಿಗೆ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಸಂಸದರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಎಸ್.ಡಿ.ಪಿ.ಐ ಕಾರ್ಯಕರ್ತರು ಸಂಸದರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ತನ್ನ ಕಾಲಾವಧಿಯ ದೀರ್ಘು ಕಾಲದಲ್ಲಿ ಇತ್ತ ತಿರುಗಿಯೂ ನೋಡದ ಸಂಸದರು ಚುನಾವಣೆ ಹತ್ತಿರವಾಗುತಿದ್ದಂತೆ ಪ್ರತ್ಯಕ್ಷಗೊಂಡಿರುವುದಾಗಿಯೂ ಆರೋಪ ಕೇಳಿ ಬಂತು. ರೈಲ್ವೇ ನಿಲ್ದಾಣದ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಇರುವ ಬಗ್ಗೆ ಎಲ್ ಡಿ ಎಫ್ ನೇತಾರರು ಹಾಗೂ ಸಂಸದರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಯ ನಡುವೆಯೂ ಸಂಸದ ರಾಜಮೋಹನ್ ಉಣ್ಣಿತ್ತಾಲ್ ನಿಲ್ದಾಣದ ಉದ್ದಕ್ಕೂ ಸಂಚರಿಸಿ ನಿಲ್ದಾಣದ ಸ್ಥಿತಿಗತಿಯನ್ನು ವೀಕ್ಷಿಸಿದರು. ನಿಲ್ದಾಣದ ಹಿನ್ನಡೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು. ಸಂಸದರೊಂದಿಗೆ ನೇತಾರರಾದ ಹರ್ಷಾದ್ ವರ್ಕಾಡಿ, ಬಿ.ಎಂ ಮನ್ಸೂರ್, ಡಿ.ಎಂ.ಕೆ ಮೊಹಮ್ಮದ್, ಇರ್ಷಾದ್ ಮಂಜೇಶ್ವರ, ಓಂ ಕೃಷ್ಣ, ಲೀಗ್ ನೇತಾರರಾದ ಅಜೀಜ್ ಮರಿಕೆ, ಮುಸ್ತಫ ಉದ್ಯಾವರ, ಫಾರೂಕ್ ಚೆಕ್ ಪೋಸ್ಟ್ ಜೊತೆಗಿದ್ದರು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ರೈಲು ನಿಲ್ದಾಣವಾಗಿದ್ದರೂ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಂಸದರು ಇತ್ತ ತಿರುಗಿ ನೋಡಿಲ್ಲ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ. ಮೇಲ್ಸೇತುವೆ ಇಲ್ಲದ ಕಾರಣ ಈಗಾಗಲೇ ಅನೇಕ ಸಾವುಗಳು ಸಂಭವಿಸಿದೆಯಾದರೂ ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಇತ್ತಕಡೆ ತಿರುಗಿಯೂ ನೋಡದ ಕಾರಣ ಪ್ರತಿಭಟನೆ ಅನಿವಾರ್ಯವಾಗಿತ್ತೆಂದು ನೇತಾರರು ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಗೆ ನೇತಾರರಾದ ಅಶ್ರಫ್ ಬಡಾಜೆ, ಹಾರಿಸ್ ಉದ್ಯಾವರ, ರಿಯಾಜ್ ಕುನ್ನಿಲ್, ಮೋನುಞ ಉದ್ಯಾವರ ಹಾಗೂ ಇಬ್ರಾಹಿಂ ಮಂಜೇಶ್ವರ ನೇತೃತ್ವ ನೀಡಿದರು.