ನಾಪತ್ತೆಯಾಗಿದ್ದ ವೃದ್ಧನ ಮೃತದೇಹ ಮನೆ ಸಮೀಪ ಕಾಡಿನಲ್ಲಿ ಪತ್ತೆ.
ಮೇ 16, 2025
0
ನಾಪತ್ತೆಯಾಗಿದ್ದ ವೃದ್ಧನ ಮೃತದೇಹ ಮನೆ ಸಮೀಪ ಕಾಡಿನಲ್ಲಿ ಪತ್ತೆ.
ಮಂಜೇಶ್ವರ: ನಾಪತ್ತೆಯಾಗಿದ್ದ ವೃದ್ಧನ ಮೃತದೇಹ ಮನೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ವರ್ಕಾಡಿ ಪೊಯ್ಯೇ ಕೆಳಗಿನ ಉಜಾರು ನಿವಾಸಿ, ಕೃಷಿಕ ಥೋಮಸ್ ಡಿ' ಸೋಜಾ (72) ಎಂಬವರ ಮೃತದೇಹ ಮನೆ ಸಮೀಪದ ಕಾಡಿನಲ್ಲಿ ನಿನ್ನೆ ಸಂಜೆ ಮಂಜೇಶ್ವರ ಪೊಲೀಸರು ಹುಡುಕಾಡುವ ವೇಳೆ ಪತ್ತೆ ಹಚ್ಚಿದ್ದಾರೆ. ಮೃತದೇಹದ ಬಳಿ ವಿಷದ ಬಾಟಲಿ ಇದ್ದು, ವಿಷಸೇವಿಸಿ, ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಶವ ಮಹಜರು ನಡೆಸಿ ಇಂದು ಬೆಳಗ್ಗೆ 11.30 ಕ್ಕೆ ಮನೆಗೆ ತರಲಾಗುವುದು. ಬಳಿಕ ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಥೋಮಸ್ ಡಿ' ಸೋಜಾರವರು ಈ ತಿಂಗಳ 13 ರಂದು ಸಂಜೆ 4 ಗಂಟೆಗೆ ಮನೆಯಿಂದ ಹೊರ ತೆರಳಿದ್ದು, ಬಳಿಕ ಮನೆಗೆ ಆಗಮಿಸದೆ ನಾಪತ್ತೆಯಾಗಿದ್ದರು. ಮನೆಯವರು, ಸಂಬಂಧಿಕರು, ನೆರೆಕರೆಯವರು ವಿವಿದೆಡೆ ಹುಡುಕಾಡಿದರು ಪತ್ತೆಯಾಗಿಲ್ಲ. ಈ ಬಗ್ಗೆ ಸಹೋದರ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಥೋಮಸ್ ಡಿ' ಸೋಜಾರವರು ದಿ. ಜೆಫ್ರಿ ಡಿ'ಸೊಜಾ - ದಿ. ಲೂಸಿ ಫೇರಾವೋ ದಂಪತಿಗಳ ಪುತ್ರನಾಗಿದ್ದು, ಅವಿವಾಹಿತರಾಗಿದ್ದರು. ಮೃತರು ಸಹೋದರ - ಸಹೋದರಿಯರಾದ: ಮುಗ್ಗಲಿನ್ ಡಿ' ಸೊಜಾ, ಡುಲ್ಲಿನ್ ಡಿ' ಸೊಜಾ, ರೀಟಾ ಡಿ' ಸೊಜಾ, ಲಾರೆನ್ಸ್ ಡಿ' ಸೊಜಾ, ಜಾನ್ ಡಿ' ಸೊಜಾ, ಫ್ರಾನ್ಸಿಸ್ ಡಿ' ಸೊಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರರ ಪೈಕಿ ಜೆರಿ ಡಿ' ಸೊಜಾ, ಜೋಕಿನ್
ಡಿ' ಸೊಜಾ, ಫೇಡ್ರಿಕ್ ಡಿ' ಸೊಜಾ ಈ ಹಿಂದೆ ನಿಧನರಾಗಿದ್ದಾರೆ.