ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಪ್ರಿಸ್ಟಿಜೀಯಸ್ ಲೀಡರ್ಶಿಪ್ ಅವಾರ್ಡ್ ಪ್ರಕಟ : ಪಶಸ್ತಿ ಪ್ರಧಾನ ಹಾಗೂ ಚೆರ್ಕಳಂ ಅನುಸ್ಮರಣೆ 25 ಜನವರಿ 2024 ರಂದು.
ಡಿಸೆಂಬರ್ 23, 2023
0
ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಪ್ರಿಸ್ಟಿಜೀಯಸ್ ಲೀಡರ್ಶಿಪ್ ಅವಾರ್ಡ್ ಪ್ರಕಟ : ಪಶಸ್ತಿ ಪ್ರಧಾನ ಹಾಗೂ ಚೆರ್ಕಳಂ ಅನುಸ್ಮರಣೆ 25 ಜನವರಿ 2024 ರಂದು
ಮಂಜೇಶ್ವರ : ಚೆರ್ಕಳಂ ಅಬ್ದುಲ್ಲ ಸ್ಮಾರಕ ಪ್ರಿಸ್ಟಿಜೀಯಸ್ ಲೀಡರ್ಶಿಪ್ ಅವಾರ್ಡನ್ನು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಡೆದ ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಪ್ರತಿನಿಧಿಗಳ ಆನ್‌ಲೈನ್ ನೋಂದಣಿ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಘೋಷಣೆ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ 6 ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
ಜನವರಿ 25, 2024 ರಂದು ಮಂಜೇಶ್ವರದಲ್ಲಿ ನಡೆಯುವ ಚೆರ್ಕಳಂ ಅಬ್ದುಲ್ಲಾ ಸಂಸ್ಮರಣಾ ಕಾಯಕ್ರಮದಲ್ಲಿ ಪಾಣಕ್ಕಾಡ್ ಸೈಯದ್ ಸ್ವಾದಿಕ್ ಅಲಿ ಶಿಹಾಬ್ ತಂಗಳ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು, ಅಬ್ದುಲ್ ಲತೀಫ್ ಉಪ್ಪಳ ಗೇಟ್, ಅಝೀಝ್ ಮರಿಕೆ, ಕತಾರ್ ಅಬ್ದುಲ್ಲಾ ಹಾಜಿ ಉದುಮ, ಯು.ಕೆ. ಸೈಫುಲ್ಲಾ ತಂಗಳ್, ಮೊಯ್ದೀನ್ ಕುಂಞಿ ಪ್ರಿಯಾ, ಎ.ಕೆ. ಆರೀಫ್, ಅಲಿ ಮಾಸ್ಟರ್, ನಾಸರ್ ಚೆರ್ಕಳಂ, ಮುಜೀಬ್ ತಳಂಕರ, ಕೆ.ಬಿ.ಎಂ. ಶೆರೀಫ್, ಬಿ. ಅಶ್ರಫ್, ಅಶ್ರಫ್ ನಾಲತಟುಕ, ಸಲೀಂ ಮಾತೇಶ್ ಚೌಕಿ ಹಾಗೂ ನಫೀಸಾ ಶಿಜಾ ಉಪಸ್ಥಿತರಿದ್ದರು.