ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಗೇಟ್ ನಿರ್ಮಾಣ: ಸಿಪಿಐ ವಿರೋಧ.
ಮೇ 21, 2025
0
ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಗೇಟ್ ನಿರ್ಮಾಣ: ಸಿಪಿಐ ವಿರೋಧ.
ಮಂಜೇಶ್ವರ:
ಕೇಂದ್ರ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಹೊರಡಿಸಿದ ಆದೇಶದ ಪ್ರಕಾರ ಒಂದು ಟೋಲ್ ಗೇಟಿನಿಂದ ಇನ್ನೊಂದು ಟೋಲ್ ಗೇಟಿಗಿರುವ ಅಂತರ 60 ಕಿ.ಮೀ. ಪ್ರಸ್ತುತ ಕೇರಳ - ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಒಂದು ಟೋಲ್ ಗೇಟ್ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಎಲ್ಲಿಂದ 18 ಕಿ.ಮೀ ಅಂತರದಲ್ಲಿ ಇನ್ನೊಂದು ಟೋಲ್ ಗೇಟ್ ನಿರ್ಮಾಣ ಅಶಾಸ್ತ್ರೀಯ ಅವೈಜ್ಞಾನಿಕ ಮಾತ್ರವಲ್ಲ ಕೇಂದ್ರ ಸರಕಾರದ ಆದೇಶ ನಗ್ಮ ಉಲ್ಲಂಘನೆ. ತುಳುನಾಡಿನ ಜನತೆಯ ಮುಗ್ದತೆಯ ಮೇಲೆ ನಡೆಸುವ ಸವಾರಿಯನ್ನು ಸಿಪಿಐ ಖಂಡಿಸುತ್ತದೆ. ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನದಲ್ಲಿ ವಿರೋಧ ವ್ಯಕ್ತಪಡಿಸಲಾಯಿತು.
ಪೈವಳಿಕೆ ಪಂಚಾಯಿತನ ಗಡಿ ಪ್ರದೇಶದಿಂದ ಇತರ ರಾಜ್ಯಗಳಿಗೆ ಅಕ್ರಮವಾಗಿ ಮಣ್ಣು ಸಾಗಿಸುವ ಮೂಲಕ ಪ್ರಕೃತಿ ನಾಶದ ಜತೆಗೆ ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು. ಕಾಸರಗೋಡು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ತಕ್ಷಣ ಭರ್ತಿಗೊಳಿಸಬೇಕೆಂದು, ಮಂಜೇಶ್ವರ ತಾಲ್ಲೂಕಿನಾದ್ಯಂತ ಪಂಚಾಯತ್, ಕಂದಾಯ,ಆರೋಗ್ಯ, ವಿದ್ಯುತ್, ಕೃಷಿ ಮೊದಲಾದ ಇಲಾಖೆಗಳಲ್ಲಿ ಇತರ ಜಿಲ್ಲೆಯಿಂದ ವರ್ಗಾವಣೆಯಾಗಿ ಮತ್ತೆ ತನ್ನ ಊರಿಗೆ ವರ್ಗಾವಣೆಯಾಗುವುದರ ಭಾಗ ಕಚೇರಿ ಬಂದಾಗದಂತೆ ಜಾಗ್ರತೆ ವಹಿಸಬೇಕೆಂದು ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ. ವೈವಳಿಕೆಯ ಪೋಸೋಡಿಗುಂಪೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು, ಪ್ರಕೃತಿ ದುರಂತ ಉಂಟಾಗದಂತೆ ಮುನ್ನೆಚ್ಚರಿಕೆ.