ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಟ್ಟಡ ಲೋಕಾರ್ಪಣೆ.
ಫೆಬ್ರವರಿ 09, 2024
0
ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಕಟ್ಟಡ ಲೋಕಾರ್ಪಣೆ.
ಉಪ್ಪಳ : ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನಯಾ ಬಝಾರ್ ನ ಅಂಬಾರು ಚೆರುಗೋಳಿ ರಸ್ತೆ ಸಮೀಪ ನಿರ್ಮಿಸಿದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಜರಗಿತು. ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಅಧ್ಯಕ್ಷತೆವಹಿಸಿದ್ದರು. ಕೇರಳ ರಾಜ್ಯ ಸಹಕಾರಿ ಬ್ಯಾಂಕಿನ ನಿರ್ದೇಶಕ ಸಾಬು ಅಬ್ರಹಾಂ, ಮಂಜೇಶ್ವರ ಬ್ಲೋಕ್ ಪಂ.ಅಧ್ಯಕ್ಷೆ ಶಮೀನಾ ಟೀಚರ್, ಮಂಗಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ರುಬಿನಾ ನೌಫಲ್, ಜಿ.ಪಂ.ಸದಸ್ಯ ಗೋಲ್ಡನ್ ಅಬ್ದುಲ್ರ ಹಿಮಾನ್, ಕೋಆಪರೇಟಿವ್ ಯೂನಿಯನ್ ಕಾಸರಗೋಡು ಸರ್ಕಲ್ ಅಧ್ಯಕ್ಷ ಕೆ.ಆರ್.ಜಯಾನಂದ, ಶ್ರೀವಿದ್ಯಾ ವಿ.ವಿ, ದಿವ್ಯಾ ಕೆ.ಬಿ, ಸೋಜನ್ ಜೋಸೆಫ್, ರವಿ ಪ್ರಸಾದ್,ಮಂಗಲ್ಪಾಡಿ ಗ್ರಾ.ಪಂ.ಸದಸ್ಯ ಬಾಬು ಬಂದ್ಯೋಡು ಮೊದಲಾದವರು ಶುಭಾಶಂಸನೆಗೈದರು. ಬ್ಯಾಂಕಿನ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸ್ವಾಗತಿಸಿ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ವಂದಿಸಿದರು. ಆಶ್ರಫ್ ಮರ್ತ್ಯ ನಿರೂಪಣೆಗೈದರು.